ಕಾಸರಗೋಡು: ಕೊರೊನಾ ವೈರಾಣು ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆ ಉಂಟಾಗದಂತೆ ಮಾಡಲು ಯುವ ಮೋರ್ಚಾ ಜಿಲ್ಲಾ ಸಮಿತಿ, ಆರ್ ಐ ಬಿ ಕೆ ಜಿಲ್ಲಾ ಸಮಿತಿ ಜಂಟಿಯಾಗಿ ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ಗೆ ರಕ್ತದಾನ ಮಾಡಲಾಯಿತು.
ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು, ಆರ್ ಐ ಬಿ ಕೆ ಮುಖಂಡ ರಾಜೇಶ್ ಕೈಂದಾರ್, ಪ್ರದೀಪ್ ಎಂ.ಕೂಟಕ್ಕಣಿ ಮಾತನಾಡಿದರು.
ವೈಶಾಖ್ ಕೋಳೋತ್, ಕೀರ್ತನ್ ಜೆ.ಕೂಡ್ಲು, ಜಯ ಕುಮಾರ್, ನಿತೀಶ್ ಕೈಂದಾರ್, ರಾಹುಲ್ ನೇತೃತ್ವ ನೀಡಿದರು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರಕ್ತ ಅಗತ್ಯವಿರುವವರು ಯುವಮೋರ್ಚಾ ಕಾರ್ಯಕರ್ತರನ್ನು ಸಂಪರ್ಕಿಸಬಹುದೆಂದು ಅಧ್ಯಕ್ಷ ಧನಂಜಯ ಮಧೂರು ತಿಳಿಸಿದ್ದಾರೆ.

