ಮುಳ್ಳೇರಿಯ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ವನಿತಾ ಘಟಕದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಡಾ.ದಯಾನಂದ ಪೈ ಮತ್ತು ಪಿ.ಸತೀಶ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಭಾನುವಾರ ಮುಳ್ಳೇರಿಯ ವ್ಯಾಪಾರ ಭವನದಲ್ಲಿ ನಡೆಯಿತು.
ವ್ಯಾಪಾರಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಶಿಬಿರವನ್ನು ಉದ್ಘಾಟಿಸಿದರು. ವನಿತಾ ಘಟಕದ ಅಧ್ಯಕ್ಷೆ ಸಿಂಧೂ.ಎಂ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಮೃಗಾಸ್ಪತ್ರೆಯ ಡಾ.ಸ್ನೆಲ್ಲಾ ಸನ್ನಿ, ರಕ್ಷಾಕಾರಿ ಶಶಿಧರ ಸುಮಂಗಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರೇಖಾ ಸ್ವಾಗತಿಸಿದರು. ಕೋಶಾಧಿಕಾರಿ ಲೀನಾ ವಂದಿಸಿದರು. ನೂರಾರು ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.


