ಕಾಸರಗೋಡು: ಕರೊನಾ ಬಾಧೆಯ ಪ್ರತಿರೋಧ ಚಟುವಟಿಕೆಗಳ ಬಿರುಸಿನ ನಡುವೆಯೂ ಶುಕ್ರವಾರ ಜಿಲ್ಲಾ ಯೋಜನೆ ಸಮಿತಿಯ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು.
ಜಿಲ್ಲೆಯ 38 ಗ್ರಾಮಪಂಚಾಯತ್ ಗಳ, ಮೂರು ನಗರಸಭೆಗಳ, 4 ಬ್ಲೋಕ್ಪಂಚಾಯತ್ ಗಳ 2020-21ನೇ ವಾರ್ಷಿಕ ಯೋಜನೆ ದಾಖಲೆಗೆ ಮಂಜೂರಾತಿ ನೀಡಲಾಯಿತು. ಕಾಸರಗೋಡು ಮತ್ತು ಮಂಜೇಶ್ವರ ಬ್ಲೋಕ್ ಪಂಚಾಯತ್ ಗಳ ಯೋಜನೆ ಸಲ್ಲಿಕೆಗೆ ಬಾಕಿಯಿದೆ.
ಚೆರುವತ್ತೂರು ಗ್ರಾಮಪಂಚಾಯತ್ ವಾರ್ಷಿಕ ಯೋಜನೆಯನ್ನು ಮೊದಲಿಗೆ ಸಲ್ಲಿಸಿತ್ತು. ಮುಗ್ಗಟ್ಟಿನ ಪರಿಸ್ಥಿಯ ನಡುವೆಯೂ ವಾರ್ಷಿಕ ಯೋಜನೆಗಳನ್ನು ಸಮಪರ್ಕವಾಗಿ ಸಲಲಿಸಿದ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಭೆ ಶ್ಲಾಘಿಸಿದೆ.