HEALTH TIPS

ಓದುಗರ ಪತ್ರ-ನಿಯಂತ್ರಣದ ಹೆಸರಲ್ಲಿ ಬಡ ವ್ಯಾಪಾರಿಗಳ ಬದುಕು ತತ್ತರ-ರೀಚಾರ್ಜ್ ಗೆ ವ್ಯವಸ್ಥೆ ಇಲ್ಲದೆ ಗ್ರಾಹಕರೂ ಅತಂತ್ರ


        ಮುಳ್ಳೇರಿಯ/ ಬದಿಯಡ್ಕ: ಕರೊನಾ ವೈರಸ್ ಮಾರಿ ಜನಜೀವನವನ್ನು ಅಸ್ತವ್ಯಸ್ತ ಮಾಡಿದ್ದು ಬದುಕವ ಆಸ್ಥೆ ಇರುವ ಮತ್ತು ಸಹಜೀವಿಗಳ ಬಗೆಗೆ ಕಾಳಜಿ ಇರುವವರೆಲ್ಲರೂ ಸಾಮಾಜಿಕ ಅಂತರ(ಸೋಶಿಯಲ್ ಡಿಸ್ಟೇನ್ಸ್)ಅನುಸರಿಸಲೇ ಬೇಕು. ಅದು ಕರ್ತವ್ಯವೂ ಜವಾಬ್ದಾರಿಯೂ ಆಗಿದೆ. ಆದರೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹೊಣೆಹೊತ್ತ ಅಧಿಕಾರಿಗಳಲ್ಲಿ ಒಂದೇ ಒಂದು ಮನವಿ.......
   ನಿತ್ಯೋಪಯೋಗಿ ವಸ್ತುಗಳ ಖರೀದಿಗಾಗಿ ಜೀನಸು ವ್ಯಾಪಾರಿಗಳಿಗೆ ಹಾಗೂ ರೇಶನ್ ಅಂಗಡಿಗಳಿಗೂ ದಿನದ ಇಂತಿಷ್ಟು ಸಮಯ ಅಂಗಡಿ ತೆರೆಯಲು ಸಮಯ ಮಿತಿ ಕೊಟ್ಟಿದ್ದೀರಿ.
ಹಾಗೆಯೇ ನಾನೊಬ್ಬ ಸ್ಟೇಶನರಿ ಅಂಗಡಿಯ ಮಾಲಕ ಈ ಮೂಲಕ ನನ್ನ ಜೀವನ ನಿರ್ವಹಣೆಯ ದಾರಿ. ಇವತ್ತಿಗೆ ಹತ್ತು ದಿನಕ್ಕಿಂತವೂ ಹೆಚ್ಚುದಿನ ನಾನು ನನ್ನ ಅಂಗಡಿ ತೆರೆದೇ ಇಲ್ಲ. ನಿನ್ನೆ ಶಟರ್ ತೆರೆಯಲೂ ಬಿಡದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ನನ್ನ ಮನೆ ಮಂದಿಗೆ ಅಥವಾ ನನ್ನಂತೆಯೇ ಇರುವ ಗೂಡಂಗಡಿಯ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನೋ ಪ್ರಾಥಮಿಕ ಸಲಕರಣೆಯ ಮೂಲಭೂತ ವ್ಯವಸ್ಥೆಯನ್ನೂ ಮಾಡದೆ ಆರ್ಡರ್ ಮಾಡಿದ್ದಾದರೆ ನಮ್ಮ ಜೀವನದ ಪಾಡೇನು.?
     ಸರ್ಕಾರದ  ಆಜ್ಞೆಯನ್ನು ಪಾಲಿಸತಕ್ಕ ಅಧಿಕಾರಿಗಳಲ್ಲಿ ಖಂಡಿತವಾಗಿಯೂ ಬೇಸರವಲ್ಲ ಮನವಿಯಷ್ಟೆ  ಜೀವಕ್ಕಾಗಿ ತುಡಿಯುವ ಸಹಜೀವಿಗಳ ಪಾಡನ್ನೂ ಗಮನಿಸಿ ತಕ್ಕುದಾಗಿ ಸ್ಪಂದಿಸಿದಲ್ಲಿ ಅಥವಾ ಸರ್ಕಾರದ ಗಮನಕ್ಕೆ ತಂದು ಸರಿಯಾದ ತೀರ್ಮಾನ ತರುವಲ್ಲಿ ಪ್ರಯತ್ನವಿರಬೇಕೆಂಬುದು.
     ವೈರಸ್ ಯಾರನ್ನೂ ಬಿಡದು. ರೇಶನ್ ತರುವವನನ್ನೂ....ಮಾವೇಲಿ ಸ್ಟೋರ್ ಗೆ ಬರುವವರನ್ನೂ...ಜೀನಸು ವ್ಯಾಪಾರಿಯನ್ನೂ...ನಾನೊಬ್ಬ ಸ್ಟೇಷನರಿ ಅಂಗಡಿಯಮಾಲಕನಾಗಿ ದಿನದ ನಾಲ್ಕೇ ಗಂಟೆ ತೆರೆಯುವಂತೆ ರಾಜಾಜ್ಞೆಯಾದರೆ ನನ್ನಂತೆಯೇ ಇರುವ ಇತರ ವ್ಯಾಪಾರಿಗಳಿಗೂ ಉಪಕಾರವಾದೀತು.
      ಖಂಡಿತಾ ವೈರಸ್ ಸೋಂಕಿನ ಬಗೆಗೆ ಇರುವ ಕಾಳಜಿಯನ್ನೊಳಗೊಂಡು ನಾನು ನನ್ನ ಸಂಸ್ಥೆಯನ್ನು ನಡೆಸಬಲ್ಲೆನೆಂಬ ವಿಶ್ವಾಸ ನನಗಿದೆ.
   ಅಲ್ಲದ ಪಕ್ಷದಲ್ಲಿ ವೈರಸ್ ಸೋಂಕಿನ ಭಾಧೆಗಿಂತಲೂ ಮಿಗಿಲಾದ ತೊಂದರೆ ಈ ಸಮಾಜಕ್ಕೆ ಆಗುವುದಂತೂ ಖಂಡಿತಾ. ಹಸಿವಿಗಿಂತ ಯಾವರೋಗ ಭಾಧೆಯೂ ಹೆಚ್ಚಲ್ಲ ನೆನಪಿರಲಿ. ಇದು ಮನವಿ ಮತ್ತು ಸಮಾಜದ ಕಾಳಜಿಗಾಗಿ....
    ಜೊತೆಗೆ ಮಾ.ತಿಂಗಳಾಂತ್ಯವಾಗುತ್ತಿದ್ದು, ಮೊಬೈಲ್ ರೀಚಾರ್ಜ್, ಟಿ.ವಿ.ಡಿಶ್ ರೀಚಾರ್ಜ್ ಗಳಿಗೆ ಸಂಬಂಧಿಸಿ ಅಗತ್ಯ ಸೇವೆಗಳು ಲಭ್ಯವಾಗದೆ ಜನರು ಸಂಕಷ್ಟಕ್ಕೊಳಗಾಗುವರು ಮತ್ತು ಅದರ ಪುಟ್ಟ ಆದಾಯದಲ್ಲಿ ಬದುಕುವ ನನ್ನಂತ ವ್ಯಾಪಾರಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ. 
                   ಬರಹ: ಮಧುಸೂದನ ಬಲ್ಲಾಳ್.
             ನವ್ಯತಾ ಸ್ಟೋರ್ ನಾಟೆಕಲ್ಲು (ಬೆಳ್ಳೂರು)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries