ಬದಿಯಡ್ಕ: ವಿಶ್ವದಾದ್ಯಂತ ಹರಡಿಕೊಂಡಿರುವ ಕೊರೊನಾ ವೈರಸ್ ರಾಜ್ಯದ ಜನತೆಯಲ್ಲಿ ಭೀತಿಯನ್ನು ಸೃಷ್ಟಿಸಿದೆ. ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬದಿಯಡ್ಕ ಶನಿವಾರ ಸಂತೆಯನ್ನು ರದ್ದುಗೊಳಿಸಲಾಯಿತು. ಸರಕಾರದ ಆದೇಶದಂತೆ ಜನರು ಗುಂಪಾಗಿ ಒಟ್ಟುಗೂಡುವುದನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ವರ್ಷಗಳಿಂದ ನಡೆಯುತ್ತಿರುವ ಬದಿಯಡ್ಕ ವಾರದ ಸಂತೆಯ ದಿನ ಪೇಟೆಯಲ್ಲಿ ಜನಜಂಗುಳಿ ಹೆಚ್ಚಿರುತ್ತಿತ್ತು. ಆದರೆ ಒಂದೆಡೆ ಕೊರೊನಾ ವೈರಸ್‍ನ ಭೀತಿ, ಎರಡನೇ ಶನಿವಾರ, ಸಂತೆ ಇಲ್ಲದಿರುವ ಕಾರಣದಿಂದ ಶನಿವಾರ ಜನರು ಪೇಟೆಯತ್ತ ಮುಖಮಾಡಿರಲಿಲ್ಲ. ಒಂದೆರಡು ಮಂದಿ ವ್ಯಾಪಾರಿಗಳು ಮಾತ್ರ ತಮ್ಮ ವಾಹನದಲ್ಲಿ ತಂದಿದ್ದ ತರಕಾರಿಗಳನ್ನು ರಸ್ತೆಬದಿಯಲ್ಲಿಯೇ ನಿಲ್ಲಿಸಿದ್ದರೂ ಜನರಿಲ್ಲದೆ ನಿರಾಶೆಯನ್ನು ಅನುಭವಿಸಿದ್ದರು. ಅಂಗಡಿಗಳು ಹಾಗೂ ವ್ಯಾಪಾರ ಸಂಸ್ಥೆಗಳು ತೆರೆದಿದ್ದರೂ ವ್ಯಾಪಾರ ಕಡಿಮೆಯಿತ್ತು. ಬಸ್‍ನಲ್ಲಿ ಜನಸಂಚಾರ ಕಡಿಮೆಯಿತ್ತು. ಟ್ಯಾಕ್ಸಿ ಚಾಲಕರು ಬಾಡಿಗೆಯಿಲ್ಲದೆ ಬಿಸಿಲ ಬೇಗೆಯನ್ನು ಸಹಿಸಿಕೊಳ್ಳುತ್ತಾ ಜನತೆಯ ಆಗಮನದ ನಿರೀಕ್ಷೆಯಲ್ಲಿದ್ದರು.
ಕೊರೊನಾ ಆತಂಕ-ಬದಿಯಡ್ಕ ಸಂತೆ ನಿಶ್ಚಲ
0
ಮಾರ್ಚ್ 15, 2020