HEALTH TIPS

ಕರೊನಾ ತಡೆಗೆ ಮುಂಜಾಗ್ರತಾ ಕ್ರಮ: ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು-ಜಿಲ್ಲಾಧಿಕಾರಿ

   
         ಕಾಸರಗೋಡು: ಜಿಲ್ಲೆಯ ಎಲ್ಲ ವ್ಯಾಪಾರ ಸಂಸ್ಥೆಗಳು ಸರ್ಕಾರದ ಆದೇಶ ಪ್ರಕಾರ ಚಟುವಟಿಕೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಎಲ್ಲ ವ್ಯಾಪಾರ ಸಂಸ್ಥೆಗಳೂ ರಾಜ್ಯ ಸರ್ಕಾರ ತಿಳಿಸಿದ ನಿಬಂಧನೆ ಪ್ರಕಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆಮಾತ್ರ ತೆರೆದು ಚಟುವಟಿಕೆ ನಡೆಸಬೇಕು. ಈ ಆದೇಶ ಉಲ್ಲಂಘಿಸುವವರ, ಕಾಳಸಂತೆ, ಅಕ್ರಮ ದಾಸ್ತಾನು ಇತ್ಯಾದಿ ನಡೆಸುವವರವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
        ಬ್ಯಾಂಕ್‍ಗಳು ತೆರೆದು ಕಾರ್ಯಾಚರಿಸಬೇಕಿದ್ದು, ಮುಂದಿನ ಒಂದು ವಾರ ಬ್ಯಾಂಕ್ ಶಾಖೆಗಳ ಮುಚ್ಚುಗಡೆ ನಡೆಸಲಾಗುವುದು. ಮುಂದಿನ 2 ವಾರಗಳ ಅವಧಿಯಲ್ಲಿ ನೂತನ ಖಾತೆ ತೆರೆಯುವ ಉದ್ದೇಶದಿಂದ ಯಾರೂ ಬ್ಯಾಂಕ್‍ಗೆ ತೆರಳ ಕೂಡದು ಎಂದು ಸಭೆ ಸಲಹೆ ಮಾಡಿದೆ. ಈ ವಿಚಾರವನ್ನು ಬ್ಯಾಂಕ್ ಪ್ರತಿನಿಧಿಗಳ ಸಲಹೆಯನ್ನು ಸಭೆ ಅಂಗೀಕರಿಸಿದೆ. ಹಣದ ವ್ಯವಹಾರಗಳಿದ್ದಲ್ಲಿ ಎ.ಟಿ.ಎಂ.,ಕ್ಯಾಷ್ ಡೆಪಾಸಿಟ್ ಮೆಷಿನ್ ಗಳನ್ನು ಈ ಅವದಿಯಲ್ಲಿ ಬಳಸಬಹುದು ಎಂದುತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಆದೇಶ ಲಭಿಸುವವರೆಗೆ ಸಿ.ಪಿ.ಸಿಆರ್.ಐ., ಎಚ್.ಎ.ಎಲ್., ಭೆಲ್ ಸಂಸ್ಥೆಗಳ ಮುಚ್ಚುಗಡೆ ಬಗ್ಗೆ ಮಧ್ಯಸ್ಥಿಕೆ ನಡೆಸುವುದಿಲ್ಲ ಎಂದು ಸಭೆ ತಿಳಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಕುಟುಂಬ ಆರೋಗ್ಯಕೇಂದ್ರಗಳಲ್ಲಿ ಪಡೆಯಬಹುದಾದ ಚಿಕಿತ್ಸೆಗಳಿಗಾಗಿ ರೋಗಿಗಳು ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗೆ, ಕಾಸರಗೋಡು ಜನರಲ್ ಆಸ್ಪತ್ರೆಗಳನ್ನು ಆಶ್ರಯಿಸದಿರುವಂತೆ ಸೂಚಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ  ಕರೊನಾ ಪ್ರತಿರೋಧ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
        ಹೆಚ್ಚುವರಿ ಮಂದಿ ಸೇರುವ ಸೂಪರ್ ಮರ್ಕೆಟ್,ಬಝಾರ್ ಇತ್ಯಾದಿಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕಿದ್ದು,ಗ್ರಾಹಕರಿಗೆ ಕೈತೊಳೆಯಲು ಹ್ಯಾಂಡ್ ವಾಷ್, ಸಾನಿಟೈಸರ್ ಇತ್ಯಾದಿ ನೀಡಬೇಕು. ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಅಪರ ಜಿಲ್ಲಾದಿಕಾರಿ,ಆರ್.ಡಿ.ಒ.ಅವರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿರುವ ಕರೊನಾ ಪ್ರತಿರೋಧ ದಳಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳನ್ನೂ ಬಲಪಡಿಸಲಾಗುವುದು. ವನೆಗಳಲ್ಲಿ ನಿಗಾದಲ್ಲಿರುವವರು ಸರ್ಕರದ ಆದೇಶ ಉಲ್ಲಂಘಿಸಿ ಹೊರಗಡೆ ಸಂಚಾರ ನಡೆಸಿದರೆ ವಾರ್ಡ್ ಮಟ್ಟದ ಜಾಗೃತಿ ಸಮಿತಿ ಕರೊನಾ ನಿಯಂತ್ರಣ ಘಟಕಕ್ಕೆ ಮಾಹಿತಿ ನೀಡಬೇಕು. ನಿಗಾದಲ್ಲಿರುವವರನ್ನು ಪ್ರತ್ಯೇಕವಾಗಿ ಸಜ್ಜುಗೊಳಿಸಿರುವ ಕರೊನಾ ನಿಯಂತ್ರಣ ಕೇಂದ್ರಕ್ಕೆ ಅವರನ್ನು ದಾಖಲಿಸಲಾಗುವುದು. ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಬಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಕೇಂದ್ರಗಳಿವೆ. ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಎರಡು ಖಾಸಗಿ ಆಸ್ಪತ್ರೆಗಳನ್ನೂ ವಹಿಸಿಕೊಂಡು22 ಬೆಡ್ ಗಳನ್ನು ಕೊರೋನಾ ರೋಗಿಗಳಿಗಾಗಿ ಮೀಸಲಿಡಲಾಗುವುದು. ಕಾಞಂಗಾಡಿನ ಕೊರೋನಾ ನಿಯಂತ್ರಣ ಕೇಂದ್ರಕ್ಕೆ ಬಿ.ಎಸ್.ಎನ್.ಎಲ್. ಸಂಪರ್ಕ ಒದಗಿಸಲಾಗುವುದು. ಇದರಲ್ಲಿ ಮೂರು ದೂರವಾಣಿಗಳು ನಿಯಂತ್ರಣ ಕೊಠಡಿಗೆ ಬರುವ ಕರೆಗಳಿಗೆ ಉತ್ತರ ನೀಡಲು ಬಳಸಲಾಗುವುದು. ಎರಡು ದೂರವಾಣಿಗಳನ್ನು ವಾರ್ಡ್‍ಮಟ್ಟದ ಜಾಗೃತಿ ಸಮಿತಿಗಳ ಚಟುವಟಿಕೆ ಸಂಬಂಧ ಮಾಹಿತಿ ನೀಡಿಕೆಗೆ ಬಳಕೆಯಾಗಲಿವೆ. ಈ ದೂರವಾಣಿಗಳ ಸಂಖ್ಯೆ ಶೀಘ್ರ ಖಚಿತವಾಗಲಿವೆ. ಜಿಲ್ಲಾಧಿಕಾರಿ ಕಚೇರಿಯ ಕರೋನಾನಿಯಂತ್ರಣಕೊಠಡಿಯಲ್ಲಿ ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries