HEALTH TIPS

ಶಬರಿಮಲೆ ಮಾಸಿಕ ಉತ್ಸವ-ನೈಮಿತ್ತಿಕ ಕಾರ್ಯಗಳಿಗೆ ಸೀಮಿತ: ಭಕ್ತಾದಿಗಳು ಭೇಟಿ ಮುಂದೂಡುವಂತೆ ಮನವಿ


       ಪತ್ತನಂತಿಟ್ಟು: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಸಿಕ ಪೂಜಾ ಮಹೋತ್ಸವಕ್ಕಾಗಿ ಮಾರ್ಚ್ 13ರಂದು ಗರ್ಭಗುಡಿ ಬಾಗಿಲು ತೆರೆದುಕೊಳ್ಳಲಿದೆ. ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಮಾಸಿಕ ಪೂಜೆಗಾಗಿ ಭಕ್ತಾದಿಗಳು ಭೇಟಿ ನೀಡದಂತೆ ದೇವಸ್ವಂ ಬೋರ್ಡ್ ಈಗಾಗಲೇ ಮನವಿ ಮಾಡಿದೆ. ದೇವಸ್ವಂ ಬೋರ್ಡಿನ ಮನವಿಯನ್ನು ಭಕ್ತಾದಿಗಳು ಪಾಲಿಸಿ, ಶಬರಿಮಲೆ ಯಾತ್ರೆಗೆ ಮುಂದೊಂದು ದಿನ ನಿಗದಿಪಡಿಸಿ ಆಗಮಿಸುವಂತೆ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್. ವಾಸು ಈಗಾಗಲೇ ಮನವಿ ಮಾಡಿದ್ದಾರೆ. ಹೆಚ್ಚಿನ ಜಾಗ್ರತೆಯೊಂದಿಗೆ ಹೆಜ್ಜೆಯಿರಿಸಬೇಕಾದ ಕಾಲಘಟ್ಟ ಇದಾಗಿದ್ದು, ಭಕ್ತಜನತೆ ತಮ್ಮೊಂದಿಗೆ ಸಹಕರಿಸಬೇಕು. ಇದಕ್ಕಾಗಿ ತಿರುವಾಂಕೂರು ದೇವಸ್ವಂ ಬೋರ್ಡ್ ಪ್ರತ್ಯೇಕ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಮಾಸಿಕಪೂಜೆಗಾಗಿ ಬಾಗಿಲು ತೆರೆದುಕೊಳ್ಳಲಿರುವ ಶಬರಿಮಲೆಯಲ್ಲಿ  ನೈಮಿತ್ತಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿರುವುದಾಗಿ ಬೋರ್ಡ್ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries