HEALTH TIPS

ಪೊಲೀಸರಿಗೆ ಹೊಸ ಹೊಣೆಗಾರಿಕೆ : ಆಪರೇಶನ್ ಕೊರೊನಾ; ಠಾಣೆಗಳಲ್ಲೂ ಬಿಗಿ ನಿಯಂತ್ರಣ

 
     ಕಾಸರಗೋಡು: ಜಾಗತಿಕವಾಗಿ ಹರಡಿ ಹತ್ತು ಸಹಸ್ರಕ್ಕಿಂತಲೂ ಹೆಚ್ಚು ಮಂದಿಯ ಪ್ರಾಣ ಅಪಹರಿಸಿ ಇನ್ನೂ ವ್ಯಾಪಿಸುತ್ತಿರವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಜತೆಗೆ ಪೆÇಲೀಸರೂ ರಂಗಕ್ಕಿಳಿದಿದ್ದಾರೆ.
      ಅದಕ್ಕಾಗಿ ಇದೀಗ ಪೆÇಲೀಸರು ಆಪರೇಶನ್ ಕೊರೊನಾ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ  ಪಾಲಿಸಬೇಕಾಗಿರುವ ಪೆÇಲೀಸರ ಹೆಗಲಿಗೆ ಈಗ ಕೊರೊನಾ ತಡೆ ಕಾರ್ಯಾಚರಣೆಯ ಹೊಣೆಗಾರಿಕೆಯನ್ನೂ ಹೇರಲಾಗಿದೆ.
     ಕೊರೊನಾ ವೈರಸ್ ಭೀತಿ ಪಸರಿಸುವಿಕೆ ತಡೆಗಟ್ಟಲು ಮನೆಗಳಲ್ಲಿ ಕಳೆಯಬೇಕಾಗಿ ಬರುವವರಿಗೂ ಅಗತ್ಯದ ಸಹಾಯ ಒದಗಿಸಲು ಈಗ ಪೆÇಲೀಸರು ಮುಂದೆ ಬಂದಿದ್ದಾರೆ. ಇಂತಹ ಮನೆಗಳಿಗೆ ಆವಶ್ಯಕ ಸಾಮಗ್ರಿಗಳನ್ನು ತಲುಪಿಸುವ ರೀತಿಯ ಮಾನವೀಯ ನೆರವಿನೊಂದಿಗೆ ಪೆÇಲೀಸರು ತೊಡಗಿದ್ದಾರೆ.
     ಆರೋಗ್ಯ ಇಲಾಖೆಯ ಮೇಲ್ನೋಟದಲ್ಲಿ ಮನೆಗಳಲ್ಲಿ ನಿಗಾದಲ್ಲಿ ಕಳೆಯುತ್ತಿರುವ ಎಲ್ಲರ ಮಾಹಿತಿಗಳನ್ನು ಆಯಾ ಪ್ರದೇಶಗಳ ಪೆÇಲೀಸರು  ಸಂಗ್ರಹಿಸಿದ್ದಾರೆ. ಅಂತಹ ಮನೆಗಳ ಮೇಲೆ ನಿಗಾ ಇರಿಸತೊಡಗಿದ್ದಾರೆ.
     ಮಾತ್ರವಲ್ಲ ಕೋವಿಡ್ -19 ಸೋಂಕು ತಡೆಗಟ್ಟಲು ಸರಕಾರ ನೀಡಿದ ಆದೇಶಗಳನ್ನು ಉಲ್ಲಂಘಿಸುವವರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಕಾರ್ಯಾಚರಣೆಯಲ್ಲೂ ಪೆÇಲೀಸರು ತೊಡಗಿದ್ದಾರೆ. ಅದರಂತೆ ಸೋಂಕು ಬಾ„ತನ ವಿರುದ್ಧ ಕಾಸರಗೋಡು ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿದೇಶದಿಂದ ಮತ್ತು ಸೋಂಕು ಪೀಡಿತ ಪ್ರದೇಶಗಳಿಂದ ಬರುವವರು ಮೊದಲು ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆಗೊಳಗಾಗಬೇಕೆಂಬ ಕಠಿಣ ನಿರ್ದೇಶ ಸರಕಾರ ಈ ಹಿಂದೆಯೇ ನೀಡಿತ್ತು. ಅದನ್ನು ಪಾಲಿಸದವರು ಮತ್ತು ಸೋಂಕು ಶಂಕೆ ನಿಗಾದಲ್ಲಿರುವವರು, ಸೋಂಕು ತಗಲಿದವರು ಮನೆ ಬಿಟ್ಟು ಯಾ ಆಸ್ಪತ್ರೆ ಬಿಟ್ಟು ಹೊರಗೆ ಹೋಗಿ ಬೀದಿಗಳಲ್ಲಿ ತಿರುಗಾಡಿದಲ್ಲಿ ಜನರ ಮಧ್ಯೆ ಸಮಾರಂಭದಲ್ಲಿ ಉತ್ಸವ, ಮದುವೆ, ಸಭೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ  ಕಠಿಣ ನಿಷೇಧ ಹೇರಲಾಗಿದೆ. ಅದನ್ನು ಉಲ್ಲಂಘಿಸುವವರನ್ನು ಗುರುತಿಸಿ ಕೇಸು ದಾಖಲಿಸುವ ಹೊಸ ಕಾರ್ಯಾಚರಣೆಯಲ್ಲೂ ಪೆÇಲೀಸರು ತೊಡಗಿದ್ದಾರೆ. ಇದೆಲ್ಲಾ ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ಅಂಗವಾಗಿ ಪೆÇಲೀಸರು ನಡೆಸುತ್ತಿರುವ ಸೇವೆಯಾಗಿದೆ. ಇಂತಹ ಹೊಣೆಗಾರಿಕೆಯ ಜತೆಗೆ ಸ್ವಂತ ಆರೋಗ್ಯ ಸಂರಕ್ಷಣೆ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯೂ ಪೆÇಲೀಸರಿಗೆ ಇನ್ನೊಂದೆಡೆ ಉಂಟಾಗಿದೆ.
    ಪೊಲೀಸ್ ಠಾಣೆಗಳಲ್ಲೂ ಬಿಗಿ ನಿಯಂತ್ರಣ : ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಪೆÇಲೀಸ್ ಠಾಣೆಗಳಲ್ಲಿ ನಿಯಂತ್ರಣ ಹೇರಲಾಗಿದೆ. ದೂರು ನೀಡಲು ಯಾ ಇತರ ಅಗತ್ಯಗಳಿಗಾಗಿ ಪೆÇಲೀಸ್ ಠಾಣೆಗೆ ಹೋಗುವವರು ಮೊದಲು ಠಾಣೆಯಲ್ಲಿ ಇರಿಸಲಾದ ಸ್ಯಾನಿಟೈಸರ್ ಬಳಸಿ ಕೈಯನ್ನು ತೊಳೆದ ಬಳಿಕವಷ್ಟೇ ಠಾಣೆಯೊಳಗೆ ಪ್ರವೇಶಿಸಲು ಬಿಡಲಾಗುತ್ತದೆ. ಠಾಣೆಗಳ ದ್ವಾರದ ಗೇಟ್‍ನ ಗ್ರಿಲ್ಸ್‍ಗಳನ್ನು ಎಳೆದು ಓರ್ವ ವ್ಯಕ್ತಿಗೆ ಮಾತ್ರವೇ ಒಳಗೆ ಪ್ರವೇಶಿಸುವಷ್ಟು ಅಂತರ ಏರ್ಪಡಿಸಲಾಗಿದೆ. ಪೆÇಲೀಸ್ ಠಾಣೆಗೆ ಬರುವವರನ್ನು ಮೊದಲು ಪ್ರವೇಶ ದ್ವಾರದ ಹೊರಗೆ ನಿಲ್ಲಿಸಿ ಬಂದ ವಿಷಯ ಪೆÇಲೀಸರು ಕೇಳುತ್ತಿದ್ದಾರೆ. ಬಳಿಕ ಅಗತ್ಯವಿದ್ದಲ್ಲಿ ಮಾತ್ರವೇ ಅದನ್ನು ಠಾಣೆಯೊಳಗೆ ಪ್ರವೇಶಿಸಲು ಬಿಡಲಾಗುತ್ತಿದೆ. ಠಾಣೆಯ ಎಲ್ಲಾ ಪೆÇಲೀಸರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗಾಗಿ ಠಾಣೆಯೊಳಗೂ ಸಾನಿಟೈಸರನ್ನು ಸಜ್ಜೀಕರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries