ಕಾಸರಗೋಡು: ಕೋವಿಡ್-19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಯುವಜನ ಆಯೋಗ ರಾಜ್ಯದ ಸ್ವಯಂಸೇವೆಯಲ್ಲಿ ಆಸಕ್ತರಾದ ಯುವಜನತೆಯನ್ನು ಯೂತ್ ಡಿಫೆನ್ಸ್ ಫೆÇೀರ್ಸ್‍ನ ಸದಸ್ಯರಾಗಲು ಕರೆನೀಡಿದೆ.
ಆರೋಗ್ಯ ಚಟುವಟಿಕೆಗಳಲ್ಲಿ, ಜಾಗೃತಿ ಚಟುವಟಿಕೆಗಳಲ್ಲಿ ರಾಜ್ಯ ಸರಕಾರಕ್ಕೆ ಅಗತ್ಯವಿರುವ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಸ್ವಯಂಸೇವಕರನ್ನು ಕೋರಲಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲೂ ಕೇರಳ ರಾಜ್ಯ ಯುವಜನ ಆಯೋಗವು ಜಾರಿಯಲ್ಲಿರುವ ಯೂತ್ ಡಿಫೆನ್ಸ್ ಫೆÇೀರ್ಸ್ ವಿಸ್ತರಣೆಗೊಳಿಸಿ ಸಮಗ್ರ ಪ್ರತಿರೋಧ ಚಟುವಟಿಕೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಸ್ವಯಂ ಸೇವಕರಾದ ಜನರಿಗೆ ಆಯೋಗ ಸಿದ್ಧಪಡಿಸಿರುವ ಆನ್‍ಲೈನ್ ಲಿಂಕ್ ಮೂಲಕ ನೋಂದಣಿ ನಡೆಸಬಹುದಾಗಿದೆ. ಮನೆಗಳಲ್ಲಿ ನಿಗಾದಲ್ಲಿ ಇರುವರಿಗೆ ಯುವಜನ ಆಯೋಗ ಪುಸ್ತಕಗಳ ಸಹಿತ ಕಿಟ್ ತಲಪಿಸುವುದು, ಮಾನಸಿಕ ಒತ್ತಡ ಕಡಿತಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಪರಿಹಾರ ಒದಗಿಸುವುದು ಇತ್ಯಾದಿಗಳಿಗೆ ನೇತೃತ್ವ ನೀಡುವುದು ಇಲ್ಲಿನ ಉದ್ದೇಶ. ಸಾಮಾಜಿಕ ಹೊಣೆಗಾರಿಕೆಯೊಂದಿಗೆ ರಾಜ್ಯ ಎದುರಿಸುತ್ತಿರುವ ಮಹಾಮಾರಿಯನ್ನು ಯುವಜನತೆಯ ಸಹಾಯದೊಂದಿಗೆ ನಡೆಸಲು ಮುಂದಕ್ಕೆ ಬರುವಂತೆ ಆಯೋಗದ ಅಧ್ಯಕ್ಷೆ ಚಿಂತಾ ಜೇರೋಂ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ: 8086987262, 9288559285,9061304080.


