ಕಾಸರಗೋಡು: ಬಿಡುವಿಲ್ಲದೆ ಬರುತ್ತಿರುವ ದೂರವಾಣಿ ಕರೆಗಳು, ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಆಗಿಂದಾಗ್ಗೆ ಸೇರುವ ಸಭೆಗಳು, ನಿಗಾದಲ್ಲಿರುವವರು ಆದೇಶಗಳನ್ನು ಉಲ್ಲಂಘಿಸುತ್ತಾರೋ ಎಂಬ ಬಗ್ಗೆ ಸಂಬಂಧಪಟ್ಟವರು ನೀಡುವ ಮಾಹಿತಿ ಸಹಿತ ವಿವಿಧ ಚಟುವಟಿಕೆಗಳ ಬಿರುಸಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚವಟಿಕೆ ನಡೆಸುತ್ತಿರುವ ಕೊರೊನಾ ವಿಶೇಷ ನಿಯಂತ್ರಣ ಘಟಕದ ಸಿಬ್ಬಂದಿ ಆಹೋರಾತ್ರಿ ಸಕ್ರಿಯರಾಗಿದ್ದಾರೆ.
ಕೊರೊನಾ ಎಂಬ ಮಹಾಮಾರಿಯ ಕರಾಳಕೈಗಳಿಂದ ಜಿಲ್ಲೆಯನ್ನು ಸಂರಕ್ಷಿಸುವ ಏಕೈಕ ಉದ್ದೇಶದೊಂದಿಗೆ ಇಲ್ಲಿ ಪ್ರತಿಯೊಬ್ಬರೂ ದಕ್ಷತೆಯ ಸೇವೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಾತೀತವಾಗಿ ಹರಡುತ್ತಿರುವ ಪರಿಣಾಮ ಜನ ಭೀತಿಯಿಂದ, ಆತಂಕದಿಂದ ನಿರಂತರ ಕರೆ ಮಾಡುತ್ತಿದ್ದರೆ ಅತ್ಯಂತ ಸಂಯಮದಿಂದ ಅವರ ಮಾತುಗಳನ್ನು ಆಲಿಸಿ, ಉತ್ತರಿಸುವ ಹೊಣೆಗಾರಿಕೆ ಇಲ್ಲಿನ ಸಿಬ್ಬಂದಿಗಿದೆ. ವಿದೇಶಗಳಿಂದ ಊರಿಗೆ ಮರಳಿದ್ದರೂ, ಸಂಬಂಧಪಟ್ಟ ಆರೋಗ್ಯ ಕೇಂದ್ರಗಳಿಗೆ ಹಾಜರಾಗದೇ ಇರುವ ಮಂದಿಯ ಮಾಹಿತಿ ಸಂಗ್ರಹಿಸಿ ಆಯಾ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವರದಿ ಸಲ್ಲಿಸುವುದು, ನಿಗಾದಲ್ಲಿರುವವರು ನಿಯಂತ್ರಣದ ವ್ಯಾಪ್ತಿಯಿಂದ ತಪ್ಪಿಸಿಕೊಂಡಲ್ಲಿ ಈ ಬಗ್ಗೆ ಕಾನೂನು ಪಾಲಕರಿಗೆ ಮಾಹಿತಿ ಒದಗಿಸುವುದು ಇತ್ಯಾದಿ ಇವರು ಕಾಯಕವಾಗಿದ್ದು, ಸಾಮಾನ್ಯರ ಮಟ್ಟಿಗೆ ಇದೊಂದು ಸವಾಲೇ ಸರಿ. ದಿನಕ್ಕೆ ಏನಿಲ್ಲವೆಂದರೂ 300 ಕ್ಕೂ ಅ„ಕ ದೂರವಾಣಿ ಕರೆಗಳು ಈ ಕೇಂದ್ರಕ್ಕೆ ಬರುತ್ತಿವೆ ಎಂದು ಸಿಬ್ಬಂದಿ ತಿಳಿಸುತ್ತಾರೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕೊರೊನಾ ವಿಶೇಷ ನಿಯಂತ್ರಣ ಘಟಕದ ಚಟುವಟಿಕೆಗಳಿಗೆ ನೇತೃತ್ವ ವಹಿಸುತ್ತಿದ್ದಾರೆ. ಅನೇಕ ಕರೆಗಳಿಗೆ ಜಿಲ್ಲಾಧಿಕಾರಿಗಳೇ ನೇರವಾಗಿ ಉತ್ತರಿಸುತ್ತಾರೆ. ಜಿಲ್ಲೆಯ ಕೊರೊನಾ ಪ್ರತಿರೋಧ ಚಟುವಟಿಕೆಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ನೇತೃತ್ವದಲ್ಲಿ 15 ಉಪಸಮಿತಿಗಳು ಚಟುವಟಿಕೆ ನಡೆಸುತ್ತಿವೆ. ಜೊತೆಗೆ ಈ ಉಪಸಮಿತಿಗಳು ಪ್ರತಿದಿನ ಈ ಕೇಂದ್ರದಲ್ಲಿ ಸಭೆ ನಡೆಸುತ್ತವೆ. ಜಿಲ್ಲಾ ಪೆÇಲೀಸ್ ವರಿಷ್ಠಾ„ಕಾರಿ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ವಾರ್ತಾಧಿಕಾರಿ, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ, ಮಾಸ್ ಮೀಡಿಯಾ ಅ„ಕಾರಿ ಮೊದಲಾದವರು ಸೇರಿರುವ ಕೊರೊನಾ ಕೋರ್ ಸಮಿತಿಯೂ ಇಲ್ಲಿ ಚಟುವಟಿಕೆ ನಡೆಸುತ್ತಿವೆ.
ಆರೋಗ್ಯ ಇಲಾಖೆ ಸಿಬ್ಬಂದಿ, ದುರಂತ ನಿವಾರಣೆ ಪ್ರಾ„ಕಾರ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಕೈಟ್ ನೇಮಿಸಿರುವ ಶಿಕ್ಷಕರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಸೇರಿರುವ ತಂಡ ಕೊರೊನಾ ವಿಶೇಷ ತಂಡ ಕೊರೊನಾ ವಿಶೇಷ ನಿಯಂತ್ರಣ ಕೊಠಡಿಯ ಚಟುವಟಿಕೆ ನಡೆಸುತ್ತಿದ್ದಾರೆ. ದೂರವಾಣಿ ಸಂಖ್ಯೆ: 04994257700.


