ಕಾಸರಗೋಡು: ಮದ್ಯ ಖರೀದಿಸುವವರಿಗೆ ಸೌಕರ್ಯ ಕಲ್ಪಿಸಲು ಎಸ್.ಪಿ. ಮತ್ತು ಡೆಪ್ಯೂಟಿ ಕಲೆಕ್ಟರ್‍ಗಳನ್ನು ನೇಮಿಸಬೇಕೆಂದು ಮುಖ್ಯಮಂತ್ರಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ವೈಂಗ್ಯಪೂರ್ವಕ ಪತ್ರ ಬರೆದಿದ್ದಾರೆ. ಫೇಸ್‍ಬುಕ್‍ನಲ್ಲಿ ಅವರು ಮದ್ಯದಂಗಡಿಗಳನ್ನು ಮುಚ್ಚದಿರುವ ಬಗ್ಗೆ ಪ್ರತಿಭಟಿಸಿ ಈ ರೀತಿಯಲ್ಲಿ ಪೆÇೀಸ್ಟ್ ಮಾಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮದ್ಯ ಮಾರಾಟ ಕೇಂದ್ರಗಳ ಮುಂದೆ ಉದ್ದನೆಯ ಕ್ಯೂ ಇದ್ದು, ಸರ್ಕಾರಕ್ಕೆ ಈ ಮೂಲಕ ವರಮಾನ ಉಂಟು ಮಾಡಲು ಕೊರೊನಾ ಭೀತಿಯ ಸಂದರ್ಭದಲ್ಲೂ ನಿಯಂತ್ರಣ ಉಲ್ಲಂಘಿಸಿ ಬಹಳಷ್ಟು ಕಷ್ಟಪಟ್ಟು ಬಿಸಿಲಿನಲ್ಲಿ ನಿಂತು ಗಂಟೆಗಳ ಕಾಲ ಕ್ಯೂ ನಿಲ್ಲಬೇಕಾಗುತ್ತದೆ. ಇವರ ಆಸಕ್ತಿ ಮಾತ್ತು ಹಿತಾಸಕ್ತಿಯನ್ನು ಕಾಪಾಡಲು ಸರಕಾರ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಅಪಹಾಸ್ಯ ಮಾಡಿದ್ದಾರೆ.


