ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಉಪಸಂಘದ ಆಶ್ರಯದಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆಯಂಗವಾಗಿ ವಯೋವೃದ್ಧರಿಗೆ ಯುಗಾದಿ ಉಡುಗೊರೆ ನೀಡುವ ಕಾರ್ಯಕ್ರಮಗಳು ಜರಗಿತು.
ಉಪ್ಪಂಗಳದ ದಿವಂಗತ ಸುಬ್ರಾಯ ಅವರ ಪತ್ನಿ ರಾಧಾಬಾಯಿ (92) ಕೋಟೆಕಣಿ ಅವರಿಗೆ ಅಧ್ಯಕ್ಷರಾದ ವಿದ್ಯಾನಂದ ಹೂಡೆ ಅವರ ನೇತೃತ್ವದಲ್ಲಿ ಸೀರೆ, ಹಣ್ಣುಹಂಪಲು ಉಡುಗೊರೆ ನೀಡಲಾಯಿತು. ಕಾರ್ಯದರ್ಶಿ ಮೋಹನ್ ರಾವ್, ವಾರಿಣಾ ರಾಮಮೂರ್ತಿ, ಆನಂದ್ ಕೊರಕ್ಕೋಡು, ಉಷಾ ಟೀಚರ್, ಚಂಚಲ ವಿ.ಹೂಡೆ, ರಾಧಾಬಾಯಿ ಅವರ ಪುತ್ರ ಕಮಲಾಕ್ಷ, ಸೊಸೆ ಪುನೀತ ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು. ತಾಳ್ಮೆ, ಸಹನೆ, ತ್ಯಾಗಮಯಿಯಾಗಿದ್ದು ಹಿರಿಯ ಸಾಧಕಿಯಾಗಿದ್ದಾರೆ.


