ಕಾಸರಗೋಡು: ಪ್ರಸ್ತುತ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಕಾಸರಗೋಡಿನ ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯ ಇಬ್ಬರು ಅಧ್ಯಾಪಕರನ್ನು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ನಡೆಸಿ ಗೌರವಿಸಲಾಯಿತು.
ಸುದೀರ್ಘ ಕಾಲ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ಹೈಯರ್ ಸೆಕೆಂಡರಿ ವಿಭಾಗದಿಂದ ನಿವೃತ್ತಿ ಹೊಂದಲಿರುವ ಪುಷ್ಪಲತಾ ಟೀಚರ್ ಹಾಗು ಹೈಸ್ಕೂಲ್ ವಿಭಾಗದಲ್ಲಿ ಅಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಕನಕರಾಜ ಅವರನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರೇಮ್‍ಜಿತ್ ಅವರು ಶಾಲು ಹೊದಿಸಿ, ಫಲಪುಷ್ಪಗಳನ್ನಿತ್ತು ಸಮ್ಮಾನಿಸಿದರು.
ಸರ್ವಶಿಕ್ಷಾ ಅಭಿಯಾನದ ಅಧ್ಯಕ್ಷರಾದ ವೆಂಕಟ್ರಮಣ ಹೊಳ್ಳ ಅವರು ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಪಿ.ರಮೇಶ್, ಸಂಘದ ಸದಸ್ಯರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ನಿವೃತ್ತರಾಗಲಿರುವ ಅಧ್ಯಾಪಕರಿಗೆ ಶುಭಾಶಂಸನೆಗೈದರು.


