ಕೊಚ್ಚಿ: ಮಹಾಮಾರಿ ಕೊರೋನಾ ಭಾರತದಲ್ಲಿ ತನ್ನ ಕರಾಳ ದೃಷ್ಟಿ ಬೀರುತ್ತಿದ್ದು ಸಾವಿನ ಸಂಖ್ಯೆ 18ಕ್ಕೇರಿದೆ. ಈ ಮಧ್ಯೆ ಕೊರೊನಾಗೆ ಹೆಚ್ ಐ ವಿ ನಿರೋಧಕ ಡ್ರಗ್ಸ್ ಪರಿಣಾಮಕಾರಿ ಎಂಬ ಸಿಹಿ ಸುದ್ದಿ ಬಂದಿದೆ.
ಕೇರಳದಲ್ಲಿ ಕೊರೋನಾದಿಂದ ಬಳಲುತ್ತಿದ್ದ ಬ್ರಿಟನ್ ಪ್ರಜೆಗೆ ಚಿಕಿತ್ಸೆಯಾಗಿ ಹೆಚ್ ಐ ವಿ ನಿರೋಧಕ ಡ್ರಗ್ಸ್ ನೀಡಲಾಗಿದ್ದು ಇದೀಗ ರಿಪೆÇೀರ್ಟ್ ನಲ್ಲಿ ನೆಗೆಟಿವ್ ಎಂದು ಬಂದಿದೆ ಎಂದು ಎರ್ನಾಕುಳಂ ನ ಮೆಡಿಕಲ್ ಕಾಲೇಜು, ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಏಳು ದಿನಗಳ ಕಾಲ ಬ್ರಿಟನ್ ಪ್ರಜೆಗೆ ಹೆಚ್ ಐ ವಿ ನಿರೋಧಕ ಡ್ರಗ್ಸ್ Ritonavir ಮತ್ತು Lopinavir ಕಾಂಬಿನೇಶನ್ ಡ್ರಗ್ಸ್ ನೀಡಲಾಗಿತ್ತು. ಇದೀಗ ರೋಗಿಯ ಸ್ಯಾಂಪಲ್ ಟೆಸ್ಟ್ ನಲ್ಲಿ ಕೋವಿಡ್ 19 ನೆಗೆಟಿವ್ ಬಂದಿದೆ.
ಬ್ರಿಟನ್ ಪ್ರಜೆ ಜೊತೆಗೆ ಆತನ ಪತ್ನಿಯೂ ಕೂಡ ಹೆ???ವಿ ನಿರೋಧಕ ಡ್ರಗ್ಸ್ ನೀಡಲಾಗಿದ್ದು ಆಕೆಗೂ ಟೆಸ್ಟ್ ರಿಪೆÇೀರ್ಟ್ ನಲ್ಲಿ ನೆಗೆಟಿವ್ ಬಂದಿದೆ.


