HEALTH TIPS

ಸತ್ಕರ್ಮಗಳಿಂದ ಸಂಪಾದಿಸುವ ಪುಣ್ಯ ಫಲವೇ ನಮ್ಮ ದೊಡ್ಡ ಆಸ್ತಿ : ಶೃಂಗೇರಿ ಶ್ರೀ

       
          ಮಧೂರು: ಮಾನವನ ಜೀವಿತಾವಧಿಯಲ್ಲಿ ಮಾಡುವ ಸತ್ಕರ್ಮ, ದಾನ, ಧರ್ಮಾದಿಗಳಿಂದ ಸಂಪಾದಿಸುವ ಪುಣ್ಯ ಫಲವೇ ನಮ್ಮ ದೊಡ್ಡ ಆಸ್ತಿ. ಸತ್ಕರ್ಮಗಳಿಂದ ಸಂಚಿತವಾದ ಪುಣ್ಯ ಫಲವು ನಮ್ಮ ಕಾಲಾನಂತರವೂ ಅದರ ಪ್ರಭಾವ ಉಳಿದುಕೊಳ್ಳುತ್ತದೆ. ಪ್ರತಿಯೊಬ್ಬನು ಪುಣ್ಯ ಫಲವೆಂಬ ಆಸ್ತಿಯನ್ನು ವೃದ್ಧಿಸಿಕೊಳ್ಳಬೇಕಿದೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರು ಶ್ರೀ ವಿಭುಶೇಖರ ಭಾರತೀ ಸನ್ನಿದಾನಂಗಳವರು ಹೇಳಿದರು.
           ಅವರು ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸ್ವಾಮೀಜಿಯವರ ವಿಜಯ ಯಾತ್ರೆಯಂಗವಾಗಿ ಆಶೀರ್ವಚನ ನೀಡಿ ಮಾತನಾಡಿದರು.
        ನಮ್ಮ ಸನಾತನ ಸಂಸ್ಕøತಿ ಯಾವನೇ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾದುದಲ್ಲ. ನಿರ್ದಿಷ್ಟವಾದ ಕಾಲದಲ್ಲಿ ಹುಟ್ಟಿಕೊಂಡದಲ್ಲ. ಅನಾದಿ ಕಾಲದಿಂದಲೂ ದೈವೀ ಚಿಂತನೆಯಿಂದಲೇ ಹುಟ್ಟಿಕೊಂಡದ್ದು, ಇದನ್ನು ಹಾಳಾಗದಂತೆ ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು. ಇದರಿಂದ ಸಂಚಿತವಾಗುವ ಪುಣ್ಯ ಶೇಷ ನಮ್ಮ ದೊಡ್ಡ ಆಸ್ತಿ ಎಂದು ಅವರು ನುಡಿದರು.
      ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಪವಿತ್ರಪಾಣಿ ರತನ್ ಕುಮಾರ್ ಕಾಮಡ ಅವರ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಕೋಶಾಧಿಕಾರಿ ಮಂಜುನಾಥ ಕಾಮತ್, ಮಲ್ಲ ಶ್ರೀ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಬಿ.ವಿ.ಕಕ್ಕಿಲ್ಲಾಯ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಬಿ.ನಾರಾಯಣಯ್ಯ, ಅಪ್ಪಯ್ಯ ನಾೈಕ್ ಮಧೂರು, ನ್ಯಾಯವಾದಿ ಅನಂತರಾಮ, ಎ.ಮನೋಹರ, ಬಲರಾಮ ಭಟ್, ಗಣೇಶ್ ಭಟ್ ನೀರ್ಚಾಲು, ಮಧೂರು ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್, ಉಪಾಧ್ಯಕ್ಷ ದಿವಾಕರ ಆಚಾರ್ಯ, ಎಸ್.ಎನ್.ಮಯ್ಯ, ವಾಸುದೇವ ಹೊಳ್ಳ, ದೇವಸ್ವಂ ಮಂಡಳಿ ಆಯುಕ್ತ ಮುರಳಿ, ದೇವಸ್ಥಾನದ ಕಾರ್ಯನಿರ್ವಹಣಾ„ಕಾರಿ ಬಾಬು, ಜತೆ ಕಾರ್ಯದರ್ಶಿ ಮುರಳಿ ಗಟ್ಟಿ, ಭಕ್ತ ಜನ ಸಮಿತಿ ಕಾರ್ಯದರ್ಶಿ ಪ್ರಭಾಶಂಕರ್, ಯು.ಬಾಲಕೃಷ್ಣ, ಜೊತೆಕಾರ್ಯದರ್ಶಿ ಕೆ.ವಿಷ್ಣು ಭಟ್, ಎ.ಮಹಾಲಿಂಗಯ್ಯ, ಗಿರೀಶ್ ಸಂಧ್ಯಾ, ಉಮೇಶ್ ನಾೈಕ್, ಸುರೇಶ ಸಿ.ಎಚ್, ಜಗದೀಶ್ ಕೂಡ್ಲು, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ನೇತೃತ್ವ ನೀಡಿದರು. 
         ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ವೇದ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಘೋಷ, ಸಪ್ತಗಿರಿ ಭಜನಾ ಮಂಡಳಿ, ಲಕ್ಷ್ಮಣಾನಂದ ಸರಸ್ವತಿ ಭಜನಾ ಸಂಘ ಅಣಂಗೂರು, ಸಿದ್ಧಿವಿನಾಯಕ ಭಜನಾ ಸಂಘ ಮಧೂರು ಮೊದಲಾದ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರಗಿತು. ಶ್ರೀ ಕ್ಷೇತ್ರದಲ್ಲಿ ಧೂಳಿ ಪಾದಪೂಜೆ, ದರ್ಶನ, ಸತ್ಸಂಗ, ಪಾದಪೂಜೆಯ ಬಳಿಕ ಆಶೀರ್ವಚನ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮುಖಂಡರು, ಶ್ರೀ ಕ್ಷೇತ್ರದ ನೌಕರ ವೃಂದ, ಸೀಮೆಯ ವಿವಿಧ ಕ್ಷೇತ್ರಗಳ ಮುಖಂಡರು, ಭಕ್ತಾದಿಗಳು ಭಿಕ್ಷಾವಂದನೆ ಸಮರ್ಪಿಸಿದರು. ಮಾ.7 ರಂದು ಮಧ್ಯಾಹ್ನ ಶ್ರೀ ಕ್ಷೇತ್ರದಿಂದ ಸ್ವಾಮೀಜಿಯವರು ನಿರ್ಗಮಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries