ಪೆರ್ಲ:ಪಡ್ರೆ ವಾಣೀನಗರ ಸರ್ಕಾರಿ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ ಸಂಪನ್ನವಾಯಿತು.
1ರಿಂದ 9ನೇ ತರಗತಿ ವರೆಗಿನ ಮಕ್ಕಳ ಭಾಷೆ ಮತ್ತು ವಿಭಿನ್ನ ವಿಷಯಾಧಾರಿತ ಕಲಿಕಾ ಚಟುವಟಿಕೆಗಳು 2 ವೇದಿಕೆಗಳಲ್ಲಿ ಪ್ರದರ್ಶನಗೊಂಡಿತು. ಮಕ್ಕಳು ತಯಾರಿಸಿದ ಹಸ್ತ ಪತ್ರಿಕೆಗಳು, ನಾಟಕ ಸಂಚಿಕೆ, ವಿಜ್ಞಾನ, ಗಣಿತ ಮಾದರಿಗಳು, ವಿಜ್ಞಾನ ಪ್ರಯೋಗಗಳ ವಿವರಣೆ ಸಹಿತ ಪ್ರದರ್ಶನ ನಡೆಯಿತು.
ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿರಿಯ ಶಿಕ್ಷಕಿ ನಾಗರತ್ನ ಅಧ್ಯಕ್ಷತೆ ವಹಿಸಿದರು. ಪ್ರಭಾರ ಪ್ರಾಂಶುಪಾಲ ಗಂಗಾಧರ ಕೆ., ಬಟ್ಯ ಮಾಸ್ತರ್ ಶುಭ ಹಾರೈಸಿದರು.ರಕ್ಷಕ ಶಿಕ್ಷಕ ಸಂಘದ ಸದಸ್ಯೆ ಲಲಿತಾ ಕುತ್ತಾಜೆ ಉಪಸ್ಥಿತರಿದ್ದರು.
ಶಿಕ್ಷಕ ರಾಜೇಶ್ ಸ್ವಾಗತಿಸಿ, ಸರಸ್ವತಿ ಕೆ.ಎನ್.ವಂದಿಸಿದರು.ಗೋಪಾಲ ಪಿ.ಕೆ.ನಿರೂಪಿಸಿದರು.


