ಕುಂಬಳೆ: ಮುಳ್ಳೇರಿಯಾ ಮಂಡಲಾಂತರ್ಗತ ಗುಂಪೆ ವಲಯದ ಮಾಸಿಕ ಸಭೆ, ಪೆÇಸಡಿ ಗುಂಪೆ ಶ್ರೀ ಶಂಕರ ಧ್ಯಾನಮಂದಿರದ ಸಮಾಲೋಚನಾ ಸಭೆ ಹಾಗೂ ಮಾಣಿ ಘಟಕದ ಜಂಟಿ ಸಭೆಯು ಕಾಪು ತ್ರಿವಿಕ್ರಮ ಹೆಬ್ಬಾರ್ ಅವರ ನಿವಾಸದಲ್ಲಿ ಮಂಡಲಾಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ಶ್ರೀ ಗುರುಗಳ ಸನ್ಯಾಸ ಸ್ವೀಕಾರ ದಿನದಂದು `ಜೀವನದಾನ' ದಿನವನ್ನಾಗಿ ಆಚರಿಸುತ್ತಿದ್ದು ಈ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಮುಳ್ಳೇರಿಯ ಮಂಡಲ ಅಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಅವರು ಗುಂಪೆ ವಲಯದ ನೂತನ ಸಂಘಟನಾ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡ ಉಮೇಶ್ ಜಿ.ಎನ್.ಗುಂಪೆ ಅವರಿಗೆ ನಿಯುಕ್ತಿಪತ್ರ ಪ್ರದಾನಮಾಡಿದರು.
ವಲಯ ಕಾರ್ಯದರ್ಶಿ ಬೆಜಪ್ಪೆ ಸುಬ್ರಹ್ಮಣ್ಯ ಭಟ್ ಅವರು ಗತ ಸಭೆಯ ವರದಿ ಮಂಡಿಸಿದರು. ಕೋಶಾಧ್ಯಕ್ಷ ಅಮ್ಮಂಕಲ್ಲು ರಾಜಗೋಪಾಲ ಭಟ್ ಲೆಕ್ಕಪತ್ರ ಮಂಡಿಸಿದರು. ವಿಭಾಗಾವಾರು ವರದಿಗಳನ್ನು ಬೆಜಪ್ಪೆ ಸುಬ್ರಹ್ಮಣ್ಯ ಭಟ್ ಸಲ್ಲಿಸಿದರು. ಮಹಾಮಂಡಲ ಸುತ್ತೋಲೆಯ ವಿಷಯಗಳನ್ನು ವಿವರಿಸಲಾಯಿತು.
ಶ್ರೀ ಶಂಕರ ಧ್ಯಾನ ಮಂದಿರ ಸಮಾಲೋಚನಾ ಸಭೆ : ಶ್ರೀ ಶಂಕರ ಧ್ಯಾನ ಮಂದಿರದ ಅಧ್ಯಕ್ಷರಾದ ರವಿ ಶಂಕರ ಭಟ್ ಎಡಕ್ಕಾನ ಮತ್ತು ಸಹಕಾರ್ಯದರ್ಶಿ ಕಕ್ವೆ ಶಂಕರ ರಾವ್ ಅವರು ಪೆÇಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರದ ಈ ವರೆಗಿನ ಅಭಿವೃದ್ಧಿ ಕಾರ್ಯಗಳ ಮಾಹಿತಿಗಳನ್ನಿತ್ತರು. ಮುಂದಿನ ಅಭಿವೃದ್ಧಿಗಳ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಲಾಯಿತು.
ಶ್ರೀ ಮಠದ ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಉಪಾಧ್ಯಕ್ಷ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಶ್ರೀ ಮಠದ ಯೋಜನೆಗಳ ಬಗ್ಗೆ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಮಾಣಿ ಘಟಕಾಧ್ಯಕ್ಷ ಉರ್ಮಿ ಗೋಪಾಲಕೃಷ್ಣ ಭಟ್, ಶ್ರೀ ಶಂಕರ ಧ್ಯಾನಮಂದಿರ ಸಮಿತಿಯ ಸದಸ್ಯರು ಮತ್ತು ಗುಂಪೆ ವಲಯದ ವಿವಿಧ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದ ಮತ್ತು ಧ್ವಜಾವರೋಹಣದೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯವಾಯಿತು.


