HEALTH TIPS

ಕೊರೊನಾ :ಚಕ್ರವ್ಯೂಹದಲ್ಲಿ ಜನರು-ಪೆÇಲೀಸ್ ಸರ್ಪಗಾವಲು


       ಬದಿಯಡ್ಕ: ಕೊರೊನಾ ವೈರಸ್ ಸೋಂಕು ವಿಸ್ತರಿಸುವುದನ್ನು ತಡೆಯಲು ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ನಗರ, ಪೇಟೆ ಹಾಗು ಗ್ರಾಮೀಣ ಪ್ರದೇಶಗಳಲ್ಲಿ ಪೆÇಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಅನಗತ್ಯವಾಗಿ ನಗರ, ಪೇಟೆಗೆ ಬಂದು ತಿರುಗಾಡುವವರನ್ನು ನಿಯಂತ್ರಿಸಲು ಪೆÇಲೀಸ್ ಸರ್ಪಗಾವಲು ಅಗತ್ಯವಾಗಿದೆ. ವಿನಾಕಾರಣ ಮನೆಯಿಂದ ಬೀದಿಗೆ ಬರುವವರನ್ನು ನಿಯಂತ್ರಿಸಲು ಲಾಠಿ ಪೆಟ್ಟು ಕೂಡಾ ಬೀಳುತ್ತಿದೆ. 
    ಮಂಜೇಶ್ವರ, ಉಪ್ಪಳ, ಕುಂಬಳೆ, ಬದಿಯಡ್ಕ, ಪೆರ್ಲ, ಮುಳ್ಳೇರಿಯ ಮೊದಲಾದೆಡೆಗಳಲ್ಲಿ ಬಾರಿಕ್ಕೇಡುಗಳನ್ನು ಸ್ಥಾಪಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವವರನ್ನು ತಡೆದು ನಿಲ್ಲಿಸಿ ಆವಶ್ಯಕತೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಬಿಡಲಾಗುತ್ತಿದೆ. ಅನಗತ್ಯವಾಗಿ ವಾಹನದಲ್ಲಿ ಬರುವವರಿಗೆ ಲಾಠಿ ಏಟಿನ ರುಚಿ ನೀಡುತ್ತಿದ್ದಾರೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಾಬು ಅವರು ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಪೆÇಲೀಸರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
        ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗೆ ಅಂಗಡಿ, ದಿನಸಿ ಅಂಗಡಿ, ತರಕಾರಿ ಅಂಗಡಿ ಸಹಿತ ನಿತ್ಯೋಪಯೋಗಿ ಸಾಮಾಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ಇಂತಹ ಅಂಗಡಿಗಳ ಮುಂದೆ ಜನರ ಗುಂಪು ಸೇರದಂತೆ ಪೆÇಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಸಾಮಗ್ರಿ ಖರೀದಿಸಲು ಬರುವವರು ಕನಿಷ್ಠ ಒಂದು ಮೀಟರ್ ದೂರವನ್ನು ಕಾಯ್ದುಕೊಳ್ಳಳು ಪೆÇಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಔಷಧಿ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ತೆರೆಯಬಹುದಾಗಿದೆ. ಆದರೆ ಅಂಗಡಿಯ ಮುಂದೆ ಗುಂಪು ಸೇರುವಂತಿಲ್ಲ.
              ವಾಹನ ತಪಾಸಣೆ ವೇಳೆ ಪೆÇಲೀಸರು ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು : ಡಿ.ಜಿ.ಪಿ
     ವಾಹನ ತಪಾಸಣೆ ನಡೆಸುತ್ತಿರುವ ಪೆÇಲೀಸ್ ಸಿಬ್ಬಂದಿ ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕೆಂದು ರಾಜ್ಯ ಪೆÇಲೀಸ್ ಮುಖ್ಯಸ್ಥ (ಡಿ.ಜಿ.ಪಿ) ಲೋಕನಾಥ್ ಬೆಹ್ರಾ ಆದೇಶ ನೀಡಿದ್ದಾರೆ. ಈ ವಿಚಾರದಲ್ಲಿ ಖಚಿತತೆ ನಡೆಸುವ ಹೊಣೆ ಆಯಾ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗಿದೆ ಎಂದು ತಿಳಿಸಿರುವರು. 
       ವಾಹನಗಳತ್ತ ಬಾಗಿ ತಪಾಸಣೆ ನಡೆಸುವ ಕ್ರಮ ಕೈಬಿಡಬೇಕು. ತಪಾಸಣೆಯ ವೇಳೆ ಕೈಗಳಿಗೆ ಗ್ಲೌಸ್ ಧರಿಸದೇ ಇರುವ ಯಾತ್ರಿಕರನ್ನು ಸ್ಪರ್ಶಿಸ ಕೂಡದು. ವಾಹನಗಳ ಡಿಕ್ಕಿ ತೆರೆಯುವ ವೇಳೆ ಅಗತ್ಯದ ಮುಂಜಾಗರೂಕತೆ ಕೈಗೊಳ್ಳಬೇಕು. ವಾಹನ ತಡೆದು ನಿಲ್ಲಿಸುವ ವೇಳೆ ಯಾತ್ರಿಕರೊಂದಿಗೆ ನಿಗದಿತ ಅಂತರ ಪಾಲಿಸಿ ಮಾತುಕತೆ ನಡೆಸಬೇಕು. ಮುಂದೆ ಆದೇಶ ಪ್ರಕಟಿಸುವವರೆಗೆ ಬ್ರೀದ್ ಅನಲೈಸರ್ ಬಳಕೆ ಮಾಡುವುದು ಬೇಡ. ವೈರಸ್ ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಕೈಗಳನ್ನು ಆಗಾಗ ಸಾಬೂನು ಯಾ ಸಾನಿಟೈಸರ್ ಬಳಸಿ ಶುಚಿಗೊಳಿಸಬೇಕು ಎಂದವರು ಆದೇಶದಲ್ಲಿ ತಿಳಿಸಿರುವರು.
       ಸಪ್ಲೈಕೋ ಮಾರಾಟ ಶಾಖೆಗಳ ಚಟುವಟಿಕೆಗಳ ಸಮಯ ಪುನರ್ ರಚನೆ : ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ನಿಷೇದಾಜ್ಞೆ ಹಿನ್ನೆಲೆಯಲ್ಲಿ ಸಪ್ಲೈಕೋ ಮಾರಾಟ ಶಾಖೆಗಳ ಚಟುವಟಿಕೆಯ ಸಮಯವನ್ನು ಪುನರ್ ರಚಿಸಲಾಗಿದೆ.
        ಮಾವೇಲಿ ಸ್ಟೋರ್, ಮಾವೇಲಿ ಸೂಪರ್ ಸ್ಟೋರ್, ಪಿಪಲ್ಸ್ ಬಝಾರ್, ಹೈಪರ್ ಮಾರ್ಕೆಟ್, ಅಪ್ನಾ ಬಝಾರ್ ಸಂಸ್ಥೆಗಳ ಚಟುವಟಿಕೆಗಳ ಸಮಯ ಬಿಡುವಿಲ್ಲದೆ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಇರುವುದು. ಮೆಡಿಕಲ್ ಸ್ಟೋರ್‍ಗಳ ಸಮಯ ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ಪುನರ್ ರಚಿಸಲಾಗಿದೆ ಎಂದು ವಲಯ ಪ್ರಬಂಧಕ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries