ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡದ ಕಾಲನಿಗಳಲ್ಲಿ ನೌಕರಿಗೆ ತೆರಳಲಾರದೆ ಆಹಾರಕ್ಕೆ ತತ್ವಾರ ಅನುಭವಿಸುತ್ತಿರುವ ಜನತೆಯನ್ನು ಪತ್ತೆಮಾಡಿ ಅವರಿಗೆ ಅಡುಗೆ ಮಾಡಿದ ಆಹಾರ ಮತ್ತು ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ನಡೆಸಲು ಜಿಲ್ಲಾಧಿಕಾರಿ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ.
ಅವರಿಗೆ ಅರ್ಹತಾ ಪತ್ರ ಒದಗಿಸಲೂ ತಿಳಿಸಲಾಗಿದೆ. ಇಂಥವರ ಮಾಹಿತಿ ಸಹಿತದ ಪಟ್ಟಿ ತಮಗೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಆಹರದ ಕೊರತೆ ಅನುಭವಿಸುತ್ತಿರುವ ಇತರ ರಾಜ್ಯಗಳ ಕಾರ್ಮಿಕರನ್ನೂ ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಜಾನುವಾರುಗಳ ತಿನಿಸು ಕ್ಷಾಮ ಪರಿಹಾರಕ್ಕೆ ತುರ್ತು ಕ್ರಮಕೈಗೊಳ್ಳುವ ಸಂಬಂಧ ಜಿಲ್ಲಾ ಮೃಗಸಂರಕ್ಷಣೆ ಇಲಾಖೆ ಅಧಿಕಾರಿಯಿಂದ ವರದಿ ಕೋರಲಾಗಿದೆ. ಕಳೆದ ವಾರ ಮಾರಾಟ ಬೆಲೆ ನಿಗದಿ ಪಡಿಸಿ (ಹರಾಜು ಕೈಬಿಟ್ಟು) ಆದ್ಯತೆ ಕ್ರಮದಲ್ಲಿ ಬೆಳಗ್ಗೆ 11 ಗಂಟೆಯಿಂದ ಮೀನು ಹರಾಜು ನಡೆಸಲು ಸೌಲಭ್ಯ ಏರ್ಪಡಿಸುವಂತೆ ಮಿನೂಗಾರಿಕೆ ಡೆಪ್ಯೂಟಿ ಡೈರೆಕ್ಟರ್ ರಿಗೆ ಆದೇಶ ನೀಡಲಾಗಿದೆ. ಕೊಯ್ಲಿಗೆ ಸಿದ್ಧವಾದ ವಾರ್ಡ್ ಮಟ್ಟದ ಬೆಳೆಗಳ ಸಂಬಂಧ ಸಮಗ್ರ ವರದಿ 24 ತಾಸುಗಳ ಅವಧಿಯಲ್ಲಿ ಸಲ್ಲಿಸುವಂತೆ ಪ್ರಧಾನ ಕೃಷಿ ಅಧಿಕಾರಿಗೆ ಹೊಣೆ ನೀಡಲಾಗಿದೆ. ಈ ಬೆಳೆಗಳ ಕೊಯ್ಲು ನಡೆಸಿ ಸರಕಾರವೇ ವಿತರಣೆಯ ಕ್ರಮ ನಡೆಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳಗ್ಗೆಯೇ ಹಸುವಿನ ಹಾಲು ಕರೆದು ಬೆಳಗ್ಗೆ 11 ಗಂಟೆಗೆ ಮಿಲ್ಮಾ ಸೊಸೈಟಿ ಗಳಿಗೆ ತಲಪಿಸುವ ಅಗತ್ಯದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಹಾಲು ಅಭಿವೃದ್ಧಿ ಅಧಿಕಾರಿಗೆ ಆದೇಶ ನೀಡಲಾಗಿದೆ. ಹಿಂಡಿ ಜಿಲ್ಲೆಗೆ ಜಿಲ್ಲೆಗೆ ತಲಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಂಚಾರ ಸೌಲಭ್ಯ ಜಿಲ್ಲಾಡಳಿತೆ ಒದಗಿಸಲಿದೆ.
ಲಾಕ್ ಡೌನ್ ಕಾಲಾವಧಿಯಲ್ಲಿ ವಿತರಣೆ ನಡೆಸಬೇಕಾದ ಆಹಾರಧಾನ್ಯಗಳ ಅಳತೆ ಗಣನೆ ಮಾಡಿ ಲಭಿಸುವ ನಿಟ್ಟಿನಲ್ಲಿ ಅಗತ್ಯದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಪ್ಲೈ ಅಧಿಕಾರಿಗೆ ಹೊಣೆ ನೀಡಲಾಗಿದೆ. ಆಹಾರ ಸಾಮಾಗ್ರಿ ಮಾರಾಟ ನಡೆಸುವ ಅಂಗಡಿಗಲಲ್ಲಿ ತಪಾಸಣೆ ನಡೆಸಲು ಬೇಕಾದ ಕ್ರಮ ಕೈಗೊಳ್ಳಲು ಜಿಲ್ಲಾ ಫುಡ್ ಆಂಡ್ ಸೇಫ್ಟಿ ಅಧಿಕಾರಿಗೆ ಆದೇಶ ನೀಡಲಾಗಿದೆ. ಕೆಟ್ಟು ಹೋಗಿದ್ದ ಟ್ರಾನ್ಸ್ ಫಾರ್ಮರ್ ಗಳನ್ನು ದುರಸ್ತಿ ಪಡಿಸಲು ತೆರಳುವ ಕೆ.ಎಸ್.ಇ.ಬಿ.ಯ ವಾಹನಗಳಿಗೆ ಪಾಸ್ ನೀಡಲಾಗುವುದು. ಸಂಚಾರ ನಿಯಂತ್ರಣ ಕಠಿಣಗೊಳಿಸಿರುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಅಧಿಕಾರಿ ಅವರ ಎಲ್ಲ ಸೇನೆಯನ್ನು ಜಿಲ್ಲೆಯ ಗಡಿಭಾಗಗಳಲ್ಲಿ ನೇಮಿಸಲಾಗುವುದು. ವಾಹನಗಳ ಸಂಚಾರಕ್ಕೆ ಅಗತ್ಯವಿರುವ ಪಾಸ್ ಗಳಲ್ಲಿ ರಸ್ತೆ ಸಾರಿಗೆ ಅಧಿಕಾರಿಯ ಸಹಿಯೂ ಅಗತ್ಯವಿರುವುದು. ತುರ್ತು ಸಂದರ್ಭಗಳಲ್ಲಿ ಸಂಚಾರ ನಡೆಸುವ ಕಿರು, ಮಧ್ಯಮ, ಘನ ರೂಪದ 30 ವಾಹನಗಳ, ಅವುಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿ 24 ತಾಸುಗಳಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಲು ರಸ್ತೆ ಸಾರಿಗೆ ಅಧಿಕಾರಿಗೆ ಆದೇಶ ನೀಡಲಾಗಿದೆ.

