ಕಾಸರಗೋಡು: ಕೇರಳದಲ್ಲಿ ಕೋವಿಡ್-19 ಹಾಟ್ ಸ್ಪೋಟ್‍ಗಳನ್ನು ಘೋಷಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿರುವುದಾಗಿ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 88 ಹಾಟ್ ಸ್ಪೋಟ್‍ಗಳನ್ನು ಗುರುತಿಸಲಾಗಿದೆ. ಪಾಸೆಟಿವ್ ಪ್ರಕರಣ, ಪ್ರೈಮರಿ ಕಾಂಟೆಕ್ಟ್, ಸೆಕೆಂಡರಿ ಕಾಂಟೆಕ್ಟ್ ಎಂಬಿವುಗಳ ಆಧಾರದಲ್ಲಿ ಹಾಟ್ ಸ್ಪೋಟ್ ಘೋಷಿಸಲಾಗಿದೆ. ರೋಗದ ಹರಡುವುದಕ್ಕೆ ಅನುಸರಿಸಿ ದಿನಾ ಹೋಟ್ ಸ್ಪೋಟ್‍ಗಳು ಪುನರ ನಿರ್ಣಯಿಸಲಾಗುವುದು. ಅದೇ ವೇಳೆ ಒಂದು ವಾರದ ಡಾಟಾ ಪರಿಶೀಲಿಸಿದ ಬಳಿಕ ಹಾಟ್ ಸ್ಪೋಟ್‍ಗಳಿಂದ ಒಂದು ಪ್ರದೇಶವನ್ನು ಹೊರತುಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 14 ಹಾಟ್ ಸ್ಪೋಟ್‍ಗಳನ್ನು ಗುರುತಿಸಲಾಗಿದೆ. ಕಾಸರಗೋಡು ಮತ್ತು ಕಾಂಞಂಗಾಡ್ ನಗರಸಭೆಗಳು, ಚೆಮ್ನಾಡ್, ಚೆಂಗಳ, ಮಧೂರು, ಮೊಗ್ರಾಲ್‍ಪುತ್ತೂರು, ಉದುಮ, ಪೈವಳಿಕೆ, ಬದಿಯಡ್ಕ, ಕೋಡೋಂ-ಬೇಳೂರು, ಕುಂಬಳೆ, ಅಜಾನೂರು, ಮಂಜೇಶ್ವರ, ಪಳ್ಳಿಕ್ಕೆರೆ ಪಂಚಾಯತಿಗಳು ಈ ಯಾದಿಯಲ್ಲಿವೆ.


