ಕುಂಬಳೆ: ಮಂಗಳೂರಿಗೆ ಸಾಗುತ್ತಿದ್ದ ಸರಕು ಹಡಗು ಎಂಜಿನ್ ಕೆಟ್ಟು ಹೋಗಿ ಕುಂಬಳೆ ಕಿನಾರೆಯಿಂದ ಸುಮಾರು 15 ನಾಟಿಕಲ್ ಮೈಲ್ ದೂರದಲ್ಲಿ ಲಂಗರು ಹಾಕಿ ನಿಂತಿದೆ.
ಕರಾವಳಿ ಪೆÇಲೀಸರು ನಾವಿಕ ಸೇನೆಯನ್ನು ಸಂಪರ್ಕಿಸಿದ್ದಾರೆ. ಬಿಟ್ಟುಮಿನ್ ಟಾರು ಹೇರಿಕೊಂಡು ಮಂಗಳೂರಿಗೆ ಹಡಗು ಪ್ರಯಾಣ ಬೆಳೆಸಿತ್ತು. ಮುಂಬೈಯಿಂದ ಈ ಹಡಗು ಹೊರಟಿತ್ತು. ಹಡಗಿನಲ್ಲಿ ಲೈಬೀರಿಯಾ ಪತಾಕೆ ಇತ್ತು. ಎಂಜಿನ್ ದುರಸ್ತಿಗೊಳಿಸಿದ ಬಳಿಕ ಮಂಗಳೂರಿಗೆ ಪ್ರಯಾಣಿಸಲಿದೆ. ಇದಕ್ಕೆ ನಾಲ್ಕು ದಿನಗಳು ಬೇಕಾಗಿ ಬರಲಿದೆ.


