HEALTH TIPS

ಸಲಹೆ-ಸೂಚನೆಗಳನ್ನು ಪಾಲಿಸಿದರೆ ಕೋವಿಡ್ 19 ವ್ಯಾಪಿಸದು: ಜಿಲ್ಲಾಧಿಕಾರಿ

 
        ಕಾಸರಗೋಡು: ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೋವಿಡ್ 19 ರ ಸಾಮಾಜಿಕ ಹರಡುವಿಕೆ ನಡೆಯದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
         covid19kasaragod  ಎಂಬ ಫೇಸ್ ಬುಕ್ ಪೇಜ್ ನ ಲೈವ್ ನಲ್ಲಿ ಶುಕ್ರವಾರ ಅವರು ಮಾತನಾಡಿದರು.
        ದಿನ ಬಿಟ್ಟು ದಿನ ಮಧ್ಯಾಹ್ನ 2.30ರಿಂದ 3.30ಕ್ಕೆ ಜಿಲ್ಲಾಧಿಕಾರಿ ಈ ಫೇಸ್ ಬುಕ್ ಪೇಜ್ ನಲಲಿ ಲೈವ್ ನಲ್ಲಿ ಸಿಗುವರು.  ಈ ಸೋಂಕಿನ ಸಾಮಾಜಿಕ ಹರಡುವಿಕೆ ತಡೆಗಟ್ಟಲು ರಾಜ್ಯ ಸರಕಾರ ಸಮರ್ಥ ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದವರು ನುಡಿದರು. ಪ್ರತಿಯೊಬ್ಬರೂ ತಮ್ಮಮನೆಗಳಲ್ಲೇ ಉಳಿದುಕೊಂಡು ಕೋವಿಡ್ 19 ಪ್ರತಿರೋಧ ಚಟುವಟಿಕೆಯನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಈಗ ವುಹಾನ್ ನಿಂದ ಬಂದ ಒಬ್ಬ ವ್ಯಕ್ತಿ ಮಾತ್ರ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅನಿವಾರ್ಯ ಸಾಮಾಗ್ರಿಗಳಿಗೆ ಅತಿಬೆಲೆ ಈಡು ಮಾಡಿದರೆ ಕಠಿನ ಕ್ರಮಕೈಗೊಳ್ಳಲಾಗುವುದು. ಇಂಥಾ ಅಂಗಡಿಗಳ ಮಾಲೀಕರ ಪರವಾನಗಿ ರದ್ದು ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.https://www.facebook.com/113385236963763/videos/535785190641574/

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries