ಕಾಸರಗೋಡು: ಜಿಲ್ಲೆಯಲ್ಲಿರುವ ಕೋವಿಡ್ 19 ರೋಗಿಗಳ ತಪಾಸಣೆ ಮತ್ತು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಪ್ರಕಟಿಸಿದ್ದಾರೆ.
ಒಂದನೇ ಹಂತ
ಮೆಡಿಕಲ್ ಆಫೀಸರ್ ಕೋವಿಡ್ 19 ತಪಾಸಣೆ ನಡೆಸಲು ಉದ್ದೇಶಿಸಿರುವ ರೋಗಿಯ ಸಂಬಂಧ ಮಾಹಿತಿ ಜನರಲ್ ಆಸ್ಪತ್ರೆ ಮತ್ತು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಬೇಕು.
ಎರಡನೇ ಹಂತ
ದೂರವಾಣಿ ಮೂಲಕ ಲಭಿಸಿದ ನಾಹಿತಿಯ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಪೆÇಲೀಸರ ಸಹಾಯ ಪಡೆಯುವರು. ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ , ಪೆÇಲೀಸರು ಆಂಬುಲೆನ್ಸ್ ನಲ್ಲಿ ಕೋವಿಡ್ 19 ತಪಾಸಣೆಗೆ ಒಳಪಡಿಸುವ ವ್ಯಕ್ತಿಯ ಬಳಿಗೆ ಬರುವರು.
ಮೂರನೇ ಹಂತ
ವ್ಯಕ್ತಿಯ ಬಳಿಗೆ ಬಂದು ಐಸೊಲೇಷನ್ ಗೆ ತೆರಳುವ ಬಗ್ಗೆ, ತಪಾಸಣೆಗಳ ಬಗ್ಗೆ ತಿಳಿಸಿ ಆಂಬುಲೆನ್ಸ್ ಮೂಲಕ ಜನರಲ್ ಆಸ್ಪತ್ರೆಗೆ ಕರೆತರುವರು.
ನಾಲ್ಕನೇ ಹಂತ
ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದ ವ್ಯಕ್ತಿಯ ಸ್ಯಾಂಪಲ್ ಪಡೆದ ನಂತರ ತಹಸೀಲ್ದಾರರ ನೇತೃತ್ವದಲ್ಲಿ ಸಿದ್ಧಪಡಿಸಿರುವ ನಿಗ ಕೇಂದ್ರಕ್ಕೆ ವರ್ಗಾಯಿಸುವರು. ಇವರಿಗಿರುವ ಆಃಆರ ವ್ಯವಸ್ಥೆಯ ಹೊಣೆ ತಹಸೀಲ್ದಾರರದು.
ಐದನೇ ಹಂತ
ಕೋವಿಡ್ 19 ತಪಾಸಣೆಯ ಫಲಿತಾಂಶಪ್ರಕಾರ ಜಿಲ್ಲಾ ವೈದ್ಯಾಧಿಕಾರಿ ಅವರ ಆದೇಶ ಪ್ರಕಾರ ನಂತರದ ಕ್ರಮಗಳನ್ನು ಕೈಗೊಳ್ಳುವರು.


