ಕಾಸರಗೋಡು: ನಗರದ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ವೈರಸ್ ಬಾಧಿತರಾದ 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ಹಲವು ಆಸ್ಪತ್ರೆಯಿಂದ ಮೂರ್ನಾಲ್ಕು ದಿನಗಳಲ್ಲಿ ಡಿಸ್ ಚಾರ್ಜ್ ಆಗಲಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಾರಗೋಡು ಜನರಲ್ ಆಸ್ಪತ್ರೆಯಲ್ಲಿ ಇಷ್ಟು ಮಂದಿ ಒಟ್ಟಿಗೆ ಡಿಸ್‍ಚಾರ್ಜ್ ಆಗಿರುವುದು ಪ್ರಥಮವಾಗಿದೆ. ಈಗಾಗಲೇ 62 ಮಂದಿ ರೋಗ ಮುಕ್ತರಾಗಿದ್ದಾರೆ.
ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸಾಮೂಹಿಕ ರೋಗ ಹರಡುವ ಸಾಧ್ಯತೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದ್ದ ಎರಿಯಾಲ್ ಕುಳಂಗರ ವೀಟಿಲ್ ಕೆ.ಸಿ.ಅಬ್ದುಲ್ ಅಮೀರ್(41) ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದವರಲ್ಲಿ ಒಳಗೊಂಡಿದ್ದಾರೆ. ಇವರು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಕರಿಪೂರ್ ವಿಮಾನ ನಿಲ್ದಾಣದ ಕಸ್ಟಂಸ್ ಸಿಬಂದಿಗಳು ಸಹಿತ ಸಾವಿರದಷ್ಟು ಮಂದಿಯನ್ನು ಸಂಪರ್ಕಿಸಿದ್ದಾಗಿ ಭೀತಿ ವ್ಯಕ್ತವಾಗಿತ್ತು. ಆಸ್ಪತ್ರೆಯ ಡಾಕ್ಟರ್‍ಗಳು, ಸಿಬಂದಿಗಳು ಚಪ್ಪಾಳೆಯೊಂದಿಗೆ 25 ಮಂದಿಯನ್ನು ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.


