ಮಂಜೇಶ್ವರ: ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರ ಮತ್ತು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದ ವತಿಯಿಂದ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಆರಂಭಗೊಂಡ ಅನ್ನಬ್ರಹ್ಮ ಯೋಜನೆಯ ಅಂಗವಾಗಿ ಕೊರೊನ ಭೀತಿಯಿಂದ ಕಂಗೆಟ್ಟು ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಾಗರಿಕರಿಗೆ ಅಕ್ಕಿ ವಿತರಿಸಲಾಯಿತು.
ಸಂತಡ್ಕ, ಕುಳೂರು, ದಡ್ಡಂಗಡಿ, ಬಾಳಿಯೂರು, ಪಜಿಂಗಾರು, ಚಿಗುರುಪಾದೆ (ಮೀಂಜ ಪಂಚಾಯತಿ)ಯ ಎಲ್ಲಾ ವಿಭಾಗದ ಕುಟುಂಬಗಳಿಗೆ ಮಂದಿರದ ಗೌರವ ಸಲಹೆಗಾರರು, ದಾನಿಗಳು, ಉದ್ಯಮಿಗಳು ಆದ ಸದಾಶಿವ ಶೆಟ್ಟಿ ಕನ್ಯಾನ, ರಘುರಾಮ್ ಶೆಟ್ಟಿ ಕನ್ಯಾನ ಮುಂಬಯಿ ಹಾಗೂ ಇತರ ಹಲವಾರು ದಾನಿಗಳ ಸಹಾಯದಿಂದ ಈಗಾಗಲೇ 280 ಮನೆಗಳಿಗೆ ಅಕ್ಕಿಯನ್ನು ವಿತರಿಸಲಾಗಿದೆ.


