ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಮೂವರಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ಐವರು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಮೂವರಿಗೂ ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ಸೋಂಕು ಬಾ„ಸಿದೆ. ಚೆಂಗಳ ನಿವಾಸಿಗಳಾದ 38 ಮತ್ತು 14 ರ ಹರೆಯದ ಹಾಗು ಚೆಮ್ನಾಡ್ ನಿವಾಸಿಯಾದ 26 ರ ಹರೆಯದ ಮಹಿಳೆಯರು ಕೊರೊನಾ ಬಾಧಿತರಾದವರು.
ಕಾಸರಗೋಡು ಜಿಲ್ಲೆಯಲ್ಲಿ 175 ಮಂದಿ ಕೊರೊನಾ ವೈರಸ್ ಸೋಂಕು ದೃಢೀಕರಿಸಿದ್ದು, ಇವರಲ್ಲಿ 157 ಮಂದಿ ಗುಣಮುಖರಾಗಿದ್ದಾರೆ. ಆಸ್ಪತ್ರೆಗಳಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದಲ್ಲಿ 15 ಮಂದಿ ಗುಣಮುಖ : ಕೇರಳದಲ್ಲಿ ಶುಕ್ರವಾರ ಮೂವರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಈ ಮೂವರು ಕಾಸರಗೋಡು ಜಿಲ್ಲೆಯವರು. ಇದೇ ವೇಳೆ ರಾಜ್ಯದಲ್ಲಿ ಒಟ್ಟು 15 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು-5, ಪತ್ತನಂತಿಟ್ಟ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ಮೂವರು, ಕೊಲ್ಲಂ ಜಿಲ್ಲೆಯಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ 450 ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟ 21725 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 21,243 ಮಂದಿ ಮನೆಗಳಲ್ಲೂ, 452 ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಶುಕ್ರವಾರ ಮಾತ್ರ ಶಂಕಿತ 144 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 21941 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ ಲಭ್ಯ 21830 ಮಂದಿಯ ಸ್ಯಾಂಪಲ್ ನೆಗೆಟಿವ್ ಆಗಿದೆ.
ಹಾಟ್‍ಸ್ಪಾಟ್‍ಗಳಲ್ಲಿ ಲಾಕ್‍ಡೌನ್ ನಿಬಂಧನೆಗಳು ಬಿಗಿ :
ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡ್, ಮಧೂರು, ಮುಳಿಯಾರು, ಕುಂಬಳೆ ಗ್ರಾಮ ಪಂಚಾಯತ್‍ಗಳು ಮತ್ತು ಕಾಸರಗೋಡು, ಕಾಂಞಂಗಾಡ್ ನಗರಸಭೆಗಳು ಜಿಲ್ಲೆಯ ಹಾಟ್ ಸ್ಪಾಟ್‍ಗಳಾಗಿವೆ. ಈ ಪ್ರದೇಶಗಳಲ್ಲಿ ಲಾಕ್ ಡೌನ್ ನಿಬಂಧನೆಗಳನ್ನು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
73 ಕೇಸು ದಾಖಲು : ಲಾಕ್‍ಡೌನ್ ಆದೇಶಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 73 ಕೇಸುಗಳನ್ನು ದಾಖಲಿಸಲಾಗಿದೆ. 84 ಮಂದಿಯನ್ನು ಬಂ„ಸಲಾಗಿದ್ದು, 27 ವಾಹನಗಳನ್ನು ವಶಪಡಿಸಲಾಗಿದೆ. ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 5, ಚಿತ್ತಾರಿಕ್ಕಲ್ 5, ಮೇಲ್ಪರಂಬ 10, ಬದಿಯಡ್ಕ 2, ವೆಳ್ಳರಿಕುಂಡ್ 6, ಕುಂಬಳೆ 4, ಹೊಸದುರ್ಗ 3, ಮಂಜೇಶ್ವರ 1, ಚಂದೇರ 5, ಕಾಸರಗೋಡು 14, ಬೇಕಲ 5, ಅಂಬಲತ್ತರ 5, ನೀಲೇಶ್ವರ 4, ಬೇಡಗಂ 3 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1693 ಕೇಸುಗಳನ್ನು ದಾಖಲಿಸಲಾಗಿದೆ. 1999 ಮಂದಿಯನ್ನು ಬಂ„ಸಲಾಗಿದೆ. 676 ವಾಹನಗಳನ್ನು ವಶಪಡಿಸಲಾಗಿದೆ.
ಮಗುವಿನ ಸಾವು : ಕೋವಿಡ್ ಬಾ„ಸಿದ ಮಂಜೇರಿ ಪಯ್ಯನಾಡಿನ ದಂಪತಿಗಳ ನಾಲ್ಕು ತಿಂಗಳ ಮಗು ಶುಕ್ರವಾರ ಬೆಳಗ್ಗೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾಯಿತು. ಈ ಮಗುವಿಗೆ ಹೃದಯ ಸಂಬಂಧವಾದ ಸಮಸ್ಯೆಯಿದ್ದು ಈ ಹಿನ್ನೆಲೆಯಲ್ಲಿ ಎ.21 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಮಗುವಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿತ್ತು. ಮಗುವನ್ನು ರಕ್ಷಿಸಲು ವೈದ್ಯರು ಶ್ರಮಿಸಿದ್ದರೂ, ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದರೊಂದಿಗೆ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿತು.


