ಉಪ್ಪಳ: ರಾಷ್ಟ್ರವ್ಯಾಪಿ ಕೊರೊನಾ ಭಾದಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ದೇಶದ ಜನತೆಯನ್ನ ಕಾಪಾಡಲು ಹಗಲಿರುಳು ನಿದ್ದೆ ಬಿಟ್ಟು ರಕ್ಷಾ ಕವಚದಂತೆ ಸೇವೆ ಸಲ್ಲಿಸುತ್ತಿರುವ ಪೆÇಲೀಸ್ ಇಲಾಖೆ, ಅರೋಗ್ಯ ಇಲಾಖೆ, ಪತ್ರಕರ್ತರಿಗೆ ಮತ್ತು ಪೌರಕಾರ್ಮಿಕ ಸಿಬ್ಬಂದಿಗಳಿಗೆ ತಮ್ಮ ಸೇವೆಯವಧಿಯಲ್ಲಿ ಆರೋಗ್ಯ ಭಾದೆಯುಂಟಾಗದಿರಲೆಂದು ಉಪ್ಪಳದ ನಿವಾಸಿಯೂ, ಇದೀಗ ಮಂಗಳೂರಿನಲ್ಲಿ ವಾಸಿಸುತ್ತಿರುವ ಸಮಾಜ ಸೇವಕ ಅಶ್ವಿತ್ ಕುಮಾರ್ ಉಪ್ಪಳ ಹಗಲಿರುಳು ಶ್ರಮಿಸುವ ಸೇವಕರಿಗೆ ಆಯುರ್ವೇದ ಗಿಡ ಮೂಲಿಕೆಯಿಂದ ತಯಾರಿಸಿದ ಕಷಾಯವನ್ನ ನೀಡುವ ಮೂಲಕ ಹೊಸ ಕ್ರಾಂತಿಯನ್ನು ಮೂಡಿಸಿದ್ದು, ಇದರ ಸಫಲತೆಯನ್ನು ಪಡೆದ ಸರ್ವರ ಪ್ರಸಂಶನೀಯಕ್ಕೆ ಪಾತ್ರರಾಗಿದ್ದಾರೆ.
ದೇಶದಲ್ಲಿ ಲಾಕ್ ಡೌನ್ ಕಾರಣ ಅದೆಷ್ಟೋ ಮಂದಿ ಅನ್ನ ಆಹಾರ ಇಲ್ಲದೆ ಸಂಕಷ್ಟ ಪಡುತ್ತಿರುವ ವೇಳೆ ಸಮಾಜದ ಸಂಕಷ್ಟವನ್ನು ಕಂಡು ಮರುಕಪಟ್ಟ ಅಶ್ವಿತ್ ತನ್ನ ವಜ್ರ ಟೆಕ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ತನ್ನ ಸಿಬ್ಬಂದಿಗಳ ನೇತೃತ್ವದಲ್ಲಿ ಮಂಗಳೂರು ಬಿಕರ್ಣಕಟ್ಟೆಯಲ್ಲಿರುವ ಶ್ರೀ ಪಾಂಡುರಂಗ ವಿಠಲ ಭಜನಾ ಮಂದಿರದಲ್ಲಿ ಸುಮಾರು 600 ಕ್ಕೂ ಅಧಿಕ ಕಡು ಬಡ ಕುಟುಂಬಗಳಿಗೆ ನಿತ್ಯೋಪಯೋಗಿ ಆಹಾರ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸುತ್ತಿರುವರು. ಜೊತೆಗೆ ಮಂಗಳೂರು ರೈಲ್ವೆ ನಿಲ್ದಾಣ, ಶಕ್ತಿನಗರ ಮೊದಲಾದ ವಿವಿಧ ಕಡೆಗಳಲ್ಲಿ ಮಧ್ಯಾಹ್ನದ ಬಿಸಿ ಊಟವನ್ನು ನೀಡುವ ಮೂಲಕ ಅಲ್ಲಿರುವ ಅನೇಕ ಹೊರ ರಾಜ್ಯ ಸಹಿತ ಊರಿನ ಅನೇಕ ಕೂಲಿಕಾರ್ಮಿಕರಿಗೆ ಇದೀಗ ನಿತ್ಯವೂ ಅನ್ನದಾತನಾಗಿರುವನು. ಇದರ ಜೊತೆಗೆ ಹೊಸ ಆವಿಷ್ಕಾರವನ್ನು ರೂಪಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಯಾಗಿ ಆರೋಗ್ಯಕರ ಗಿಡ ಮೂಲಿಕೆಯಿಂದ ಸಿದ್ದ ಪಡಿಸಿದ ಕಷಾಯ ವೊಂದನ್ನು ಹಗಲಿರುಳು ಶ್ರಮಿಸುವ ವಿವಿಧ ಇಲಾಖೆಗಳಿಗೆ ನೀಡುವ ಮೂಲಕ ಹೊಸ ಹೆಜ್ಜೆಯನ್ನ ರೂಪಿಕರಿಸಿದ್ದಾರೆ.
ನಮ್ಮ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವವರಿಗಾಗಿ ತಮ್ಮಿಂದಾದ ಸಹಾಯವನ್ನು ಮಾಡಬೇಕೆಂದು ಅಶ್ವಿತ್ ರ ಮನಸ್ಸಿನ್ನಲಿ ಯೋಚನೆ ಬಂದ ಹಿನ್ನಲೆಯಲ್ಲಿ ಆಯುರ್ವೇದ ಪಂಡಿತರ ಸಲಹೆಯಂತೆ ಕಷಾಯವನ್ನ ತಯಾರಿಸಿ ಗುರುವಾರದಿಂದ ನೀಡತೊಡಗಿದ್ದಾರೆ. ಇದರ ಫಲ ಎಂಬಂತೆ ಕಷಾಯ ಸ್ವೀಕರಿಸಿದ ಹಲವರು ಶುಕ್ರವಾರವೂ ಇವರ ಬಳಿ ಬೇಡಿಕೆಯನ್ನಿರಿಸಿದ್ದಾರೆ. ಸಾರ್ವಜನಿಕ ಸೇವೆಗಾಗಿ ದಿನದ 24 ಗಂಟೆ ಮನೆ ಬಿಟ್ಟು ಹೊರಗಡೆ ಕಾರ್ಯ ನಿರ್ವಹಿಸುವ ಪೆÇೀಲಿಸ್ ಇಲಾಖೆ, ಆರೋಗ್ಯ ಇಲಾಖೆ ಪೌರ ಕಾರ್ಮಿಕರು, ಹಾಗೂ ಪತ್ರಕರ್ತರು ಇವರ ಸೇವಾ ಕೊಡುಗೆಯ ಅನುಕೂಲ ಪಡೆಯುತ್ತಿದ್ದಾರೆ.
ಕಾಷಾಯಕ್ಕೆ ಬೇಕಾದ ಗಿಡಮೂಲಿಕೆಯ ಮಿಶ್ರಣವನ್ನು ಆಯುರ್ವೇದ ಮಾರ್ಗದರ್ಶಕರ ಮುಖಾಂತರ ಮಾಡಿಸಿ ಬೆಳಗ್ಗಿನ ವೇಳೆ ಶ್ರೀ ಪಾಂಡುರಂಗ ಭಜನಾ ಮಂದಿರದ ಸಿಬ್ಬಂದಿಗಳು ಮತ್ತು ಮತ್ತು ಅಶ್ವಿತ್ ರ ತಂಡದವರು ಕಷಾಯ ವಿತರಣೆ ನಡೆಸುತ್ತಿದ್ದಾರೆ. ಇದೀಗ ಕಳೆದೆರಡು ದಿನಗಳಿಂದ ಸುಮಾರು 200 ಮಂದಿಗೆ ಆಗುವಷ್ಟು ಕಷಾಯವನ್ನು ತಯಾರಿಸಿ, ಇವರದ್ದೇ ತಂಡವಾದ ಕೊರೋನಾ ವಾರಿಯರ್ಸ್ ಗೆ ಹಸ್ತಾಂತರಿಸುತ್ತಾರೆ. ಬಳಿಕ ಕೊರೊನಾ ವಾರಿಯರ್ಸ್ ಸದಸ್ಯರು ಬೇಡಿಕೆ ಸಲ್ಲಿಸಿದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿತರಿಸುತ್ತಿದ್ದಾರೆ. ಕಷಾಯವನ್ನ ಕುಡಿದ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಅಶ್ವಿನ್ ತಿಳಿಸಿದ್ದಾರೆ. ಜನರ ಮೆಚ್ಚುಗೆಯ ಮಾತು ನಮಗೆ ಉತ್ಸಾಹದ ಪ್ರೇರಣೆಯನ್ನು ನೀಡಿದ್ದು, ಇನ್ನಷ್ಟು ಸಹಾಯ ಮಾಡಲು ಪ್ರೇರೇಪಿಸಿತು ಎಂದು ಅಶ್ವಿತ್ ರವರ ಮಾತಾಗಿದೆ. ಮುಂದಿನ ಕೆಲವು ದಿನಗಳವರೆಗೆ ಕಷಾಯವನ್ನು ವಿತರಿಸುವ ಯೋಜನೆಯನ್ನು ಅಶ್ವಿತ್ ರ ತಂಡ ಹಾಕಿಕೊಂಡಿದೆ.