ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಟ್ಟು 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 7 ಮಂದಿ ಕಾಸರಗೋಡು ಜಿಲ್ಲೆಯವರು. ಕಣ್ಣೂರು ಹಾಗು ತೃಶ್ಶೂರು ತಲಾ ಒಬ್ಬರಂತೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಅದೇ ವೇಳೆ ಕೇರಳದಲ್ಲಿ ಶುಕ್ರವಾರ 14 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಣ್ಣೂರು-5, ಕಾಸರಗೋಡು-3, ಇಡುಕ್ಕಿ-2, ಕಲ್ಲಿಕೋಟೆ-2, ಪತ್ತನಂತಿಟ್ಟ-1, ಕೋಟ್ಟಯಂ-1 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಈ ವರೆಗೆ 295 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 135 ಕ್ಕೇರಿದೆ.
ರೋಗ ಬಾಧಿತರಲ್ಲಿ 206 ಮಂದಿ ವಿದೇಶದಿಂದ ಬಂದವರು. 7 ಮಂದಿ ವಿದೇಶಿಯರು. ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ 78 ಮಂದಿಗೆ ರೋಗ ಬಾಧಿಸಿದೆ.
ಶುಕ್ರವಾರ ರೋಗ ದೃಢೀಕರಿಸಿದವರಲ್ಲಿ ಮೂವರು ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿ ವಾಪಸಾಗಿ ನಿಗಾದಲ್ಲಿದ್ದವರು. ಇನ್ನೋರ್ವ ಗುಜರಾತ್ ನಿವಾಸಿ. ರಾಜ್ಯದಲ್ಲಿ ಒಟ್ಟು 169997 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 169291 ಮಂದಿ ಮನೆಗಳಲ್ಲೂ, 706 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ರಾಣಿ ನಿವಾಸಿಗಳಾದ ದಂಪತಿಗಳು ಹಾಗು ಇವರಿಗೆ ಶುಶ್ರೇಷೆ ನೀಡಿದ ದಾದಿ ಗುಣಮುಖರಾಗಿ ಕೋಟ್ಟ್ಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತಲುಪಿದ್ದಾರೆ. ಎ.3 ರಂದು ರಾಜ್ಯದಲ್ಲಿ 154 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 251 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಸು ದಾಖಲು : ಕಾಸರಗೋಡು ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಿದ 20 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ-3, ಕಾಸರಗೋಡು-1, ವಿದ್ಯಾನಗರ-1, ಬದಿಯಡ್ಕ-1, ಆದೂರು-2, ಬೇಕಲ-2, ಅಂಬಲತ್ತರ-2, ಹೊಸದುರ್ಗ-1, ಚಂದೇರ-3, ಚೀಮೇನಿ-2, ವೆಳ್ಳರಿಕುಂಡು-1, ಚಿಟ್ಟಾರಿಕ್ಕಲ್-1 ಎಂಬಂತೆ ಪೆÇಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಲಾಗಿದೆ. ವಿವಿಧ ಕೇಸುಗಳಿಗೆ ಸಂಬಂ„ಸಿದಂತೆ 45 ಮಂದಿಯನ್ನು ಬಂಧಿಸಲಾಗಿದೆ. 18 ವಾಹನಗಳನ್ನು ವಶಪಡಿಸಲಾಗಿದೆ.
ಇದು ವರೆಗೆ ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಾಗಿ 289 ಕೇಸುಗಳನ್ನು ದಾಖಲಿಸಲಾಗಿದ್ದು, 435 ಮಂದಿಯನ್ನು ಬಂ„ಸಲಾಗಿದೆ. 194 ವಾಹನಗಳನ್ನು ವಶಪಡಿಸಲಾಗಿದೆ.


