HEALTH TIPS

ಕಾಸರಗೋಡಿನ ಕೊರೋನಾ ರೋಗಿಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ: ವಿವರ ಕೇಳಿದ ಕೇರಳ ಹೈಕೋರ್ಟ್


        ಕೊಚ್ಚಿನ್: ಕಾಸರಗೋಡಿನ ಕೊರೋನಾ ರೋಗಿಗಳಿಗೆ ಭೌಗೋಳಿಕವಾಗಿ ಸನಿಹದಲ್ಲಿರುವ ಕರ್ನಾಟಕದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಬಗೆಗೆ ರೋಗಿಗಳಿಗೆ ಮಾಡಬಹುದಾದ ವ್ಯವಸ್ಥೆಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಕೇರಳ ಹೈಕೋರ್ಟ್ ಮಂಗಳವಾರ ಕೇರಳ ಮತ್ತು ಕರ್ನಾಟಕ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
       ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಕೇರಳ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದ್ದಾರೆ.ಕೋವಿಡ್ ಮಹಾಮಾರಿ ಹರಡುವಿಕೆ ತಡೆಯಲು ರಾಜ್ಯಗಳು ತಮ್ಮ ಗಡಿಯನ್ನು ನಿಬರ್ಂಧಿಸಿದೆ. ಹಾಗಾಗಿ ಮಂಗಳುರು-ಕಾಸರಗೋಡನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರ್ ಬಂದ್ ಆಗಿದ್ದು ಕೇರಳಿಗರು ಚಿಕಿತ್ಸೆಗೆ ಕರ್ನಾಟಕಕ್ಕೆ ಆಗಮಿಸಲು ಆಗುತ್ತಿಲ್ಲ ಇದನ್ನು ತಕ್ಷಣ ಪರಿಹರಿಸಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ.
      ಕರ್ನಾಟಕದ ಅಡ್ವೊಕೇಟ್ ಜನರಲ್ ಪಿ.ಕೆ.ನವಡಗಿ ವಿಚಾರಣೆ ಸಮಯದಲ್ಲಿ ಕೇರಳದ  ಬೇಡಿಕೆಯನ್ನು ಪರಿಗಣಿಸಬಹುದು ಎಂದಿದ್ದಾರೆ. ಕಣ್ಣೂರು-ಇರಿಟ್ಟಿ-ಕೊಟ್ಟುಪುಳ-ಮಂಗಳೂರು-ವಿರಾಜಪೇಟೆ ಮಾರ್ಗವನ್ನು  ಅಗತ್ಯ ವಸ್ತುಗಳ ಸಾಗಣೆಗೆ ತೆರೆವು ಮಾಡಲು ಸಾಧ್ಯವಿದೆ. ಆದರೆ ಅದಕ್ಕಾಗಿ ಕೇರಳ ಸರ್ಕಾರ ಸೂಕ್ತವಾದ ಪತ್ರವನ್ನು ನೀಡಬೇಕು ಎಂದಿದ್ದಾರೆ. ಕರ್ನಾಟಕ ಗೃಹ ಇಲಾಖೆ. ನಂತರ ಕೇರಳದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಂಜಿತ್ ಥಂಪನ್, ಕರ್ನಾಟಕವು ಅಗತ್ಯ ವಸ್ತುಗಳ ಸಾಗಣೆಗಾಗಿ ಈ ಮಾರ್ಗವನ್ನು ತೆರೆಯುವ ಬಗೆಗೆ ಚಿಂತನೆ ನಡೆಸಬಹುದು ಎಂದರು. ಇದಾದ ನಂತರ ನ್ಯಾಯಾಲಯವು ಕಾರ್ಯದರ್ಶಿ, ಗೃಹ ಇಲಾಖೆ, ಕರ್ನಾಟಕ ಸರ್ಕಾರದೊಡನೆ ಸಂವಹನ ನಡೆಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಕಣ್ಣೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
       ಕಣ್ಣೂರು-ಇರಿಟ್ಟಿ-ಮನಂತವಾಡಿ-ಸರ್ಗೂರ್-ಬೇಗೂರ್-ನಂಜನಗೂಡು-ಮೈಸೂರು ಮತ್ತು ಕಣ್ಣೂರು-ಸುಲ್ತಾನ್ ಬತೇರಿ -ಗುಂಡ್ಲುಪೇಟೆ -ಮೈಸೂರು ಮಾರ್ಗಗಳನ್ನು ಈಗಾಗಲೇ ಅಗತ್ಯ ವಸ್ತುಗಳ ಸಾಗಣೆಗೆ ತೆರೆಯಲಾಗಿದೆ ಮತ್ತು ಅದನ್ನು ಮುಂದುವರೆಸಲಾಗುವುದು ಎಂದು ಕರ್ನಾಟಕದ ಅಡ್ವೊಕೇಟ್ ಜನರಲ್ ಹೇಳಿದ್ದಾರೆ. ಜನಸಂದಣಿ ಹೆಚ್ಚಾಗಿದ್ದ ಕಾರಣ ಮಂಗಳೂರು ಆಸ್ಪತ್ರೆಗಳಿಗೆ ಕಾಸರಗೋಡು ರೋಗಿಗಳ ಸೇರ್ಪಡೆಗೆ ಅವಕಾಶ ಕಲ್ಪಿಸಿರಲಿಲ್ಲ. ಇಂತಹಾ ವೇಳೆ ಅದು ಸಾಧ್ಯವಾಗುವುದಿಲ್ಲ. ರೋಗಿಗಳ ಸಾಗಣೆಗೆ ಅನುಮತಿ ನೀಡುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‍ಡಿಎಂಎ) ಕಾಯ್ದೆಯಡಿ ಹೊರಡಿಸಲಾದ ನಿರ್ದೇಶನಗಳಿಗೆ ಕೇರಳ ಮತ್ತು ಕರ್ನಾಟಕ ಎರಡೂ ಬದ್ಧವಾಗಿವೆ ಎಂದು ಕೇರಳ ಹಾಗೂ ಕರ್ನಾಟಕ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ.ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲು ನಿವಾಸದ ಅವಶ್ಯಕತೆಯು ಮಾನದಂಡವಾಗಿರಬಾರದು ಎಂದು  ಕೇರಳ ವಾದಿಸಿದೆ. ತಲಪ್ಪಾಡಿಯಿಂದ ಮಂಗಳೂರಿಗೆ ಕೇವಲ 15 ಕಿಮೀ ದೂರವಿದೆ ಎಂದು ಕೇರಳ ಸರ್ಕಾರದ ಪರವಕೀಲರು ನ್ಯಾಯಾಲಯಕ್ಕ ಅರಿಕೆ ಮಾಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries