ತಿರುವನಂತಪುರ: ಕೋವಿಡ್-19 ಅನ್ವಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೇರಳ ಎಸ್ಸೆಸೆಲ್ಸಿ ಹಾಗೂ ಹೈಯರ್ ಸೆಕೆಂಡರಿ(ಪ್ಲಸ್‍ಟು) ಶಾಲಾ ಪರೀಕ್ಷೆಗಳನ್ನು ಮೇ ಎರಡನೇ ವಾರದಲ್ಲಿ ನಡೆಸಲು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮಂಗಳವಾರ ತಿರುವನಂತಪುರದಲ್ಲಿ ನಡೆದ ಕ್ಯೂಐಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಲಾಖ್‍ಡೌನ್ ಕೊನೆಗೊಂಡ ನಂತರ ಹತ್ತು ದಿವಸಗಳ ಕಾಲಾವಧಿಯಲ್ಲಿ ಶಾಲೆಗಳಲ್ಲಿ ಪರೀಕ್ಷಾ ಸಿದ್ಧತೆ ನಡೆಸಿಕೋಳುವಂತೆ ಸೂಚಿಸಲಾಗಿದೆ. ಎಸ್ಸೆಸೆಲ್ಸಿ ಪರೀಕ್ಷೆ ಬೆಳಗ್ಗೆ ಹಾಗೂ ಪ್ಲಸ್‍ಟು ಪರೀಕ್ಷೆಗಳನ್ನು ಮದ್ಯಾಹ್ನ ನಂತರವೂ ನಡೆಸಲು ತೀರ್ಮಾನಿಸಲಾಗಿದೆ. ಎಸ್ಸೆಸೆಲ್ಸಿಯಲ್ಲಿ ಮೂರು, ಹೈಯರ್‍ಸೆಕೆಂಡರಿಗೆ ನಾಲ್ಕು ಹಾಗೂ ವೊಕೇಶನಲ್ ಹೈಯರ್ ಸೆಕೆಂಡರಿಗೆ ಐದು ಪರೀಕ್ಷೆ ನಡೆಸಲು ಬಾಕಿಯಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೌಲ್ಯಮಾಪನ ಶೀಘ್ರ ನಡೆಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಕೇಂದ್ರಗಳು ಹಾಗೂ ಉಪ ಕೇಂದ್ರಗಳನ್ನು ತೆರೆಯಲಾಗುವುದು. ಪ್ಲಸ್‍ವನ್ ಪರೀಕ್ಷೆಗಳನ್ನು ನಂತರದ ದಿನಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.


