ಪೆರ್ಲ: ಕೋವಿಡ್ 19 ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ವಿಶೇಷ ಸಂದೇಶ ನೀಡಿದ ಬೆನ್ನೆಗೇ ಕೇರಳ ಸರ್ಕಾರದ ಉದ್ಯೋಗಿಯೋರ್ವ ತನ್ನ ಪೇಸ್ ಬುಕ್ ಪುಟದಲ್ಲಿ ಕೆಟ್ಟದಾಗಿ ಕಮೆಂಟ್ ಬರೆದು, ಮೋದಿಯನ್ನು ಅವಹೇಳನಗೈದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪೆರ್ಲದಲ್ಲಿರುವ ಎಣ್ಮಕಜೆ ಗ್ರಾ.ಪಂ. ಕೃಷಿ ಭವನದ ಅಧಿಕಾರಿ ವಿನೀತ್ ವಿ.ವರ್ಮ ಎಂಬವರು ತನ್ನ ಪೇಸ್‍ಬುಕ್ ಪುಟದಲ್ಲಿ ಪ್ರಧಾನ ಮಂತ್ರಿಗಳನ್ನು ಅವಹೇಳನಗೈದು ಪೋಸ್ಟ್ ಮಾಡಿದ್ದಾರೆ. ತಾವು ಪ್ರಧಾನಿಯಾಗಿ ಹೆಡ್ಡನಾಗಿರುವಿರೋ ಅಲ್ಲ ಹೆಡ್ಡನಂತೆ ವರ್ತಿಸುವಿರೋ ಎಂದು ಆರಂಭಿಸಿರುವ ಪೋಸ್ಟ್ ನಲ್ಲಿ ರಾಷ್ಟ್ರಾದ್ಯಂತ ವ್ಯಾಪಕಗೊಳ್ಳುತ್ತಿರುವ ವೈರಸ್ ರೋಗದ ತುರ್ತು ಸಮಸ್ಯೆ ಗಮನಿಸಿ ಅದಕ್ಕಾಗಿ ಏನಾದರೂ ಮಾಡಬಾರದೆ. ನಾವು ವಿದ್ಯುತ್ ಓಫ್ ಮಾಡುವೆವು. ಅದಷ್ಟು ಗಂಭೀರದ್ದಲ್ಲ. ಆದರೆ ಕೋವಿಡ್ ಗೆ ಎದುರಾಗಿ ಯಾರಾದರೂ ಔಷಧಿ ಸಂಶೋಧಿಸಲು ಶ್ರಮಿಸಿರಿ. ಹೆಚ್ಚೆಚ್ಚು ಐಸೋಲೇಶನ್ ಸೌಕರ್ಯ ಏರ್ಪಡಿಸಿ. ವೆಂಟಿಲೇಟರ್ ಗಳನ್ನೂ ಹೆಚ್ಚು ವ್ಯವಸ್ಥೆಗೊಳಿಸಿ ಮೊದಲಾದ ಬೇಡಿಕೆಗಳನ್ನು ನೀಡುವ ಮೂಲಕ ಪ್ರಧಾನಿಯನ್ನು ತರಾಟೆಗೆ ತೆಗೆದಿರುವುದು ಕಂಡುಬಂದಿದೆ.
ಸರ್ಕಾರಿ ಉದ್ಯೋಗಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರದ ಪ್ರಧಾನಿಗೆ ಎಸಗಿರುವ ಅವಹೇಳನ ವ್ಯಾಪಕ ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಪ್ರಧಾನ ಮಂತ್ರಿಗಳ ಕಾರ್ಯಾಲಯ, ರಾಜ್ಯ ಮುಖ್ಯ ಕಾರ್ಯದರ್ಶಿಗಳ ಸಹಿತ ಉನ್ನತ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.


