ಕಾಸರಗೋಡು: ಲೀಗಲ್ ಮೆಟ್ರಾಲಜಿ ಇಲಾಖೆ ಅಧಿಕಾರಿಗಳು ಜಿಲ್ಲೆಯ 15 ಪಡಿತರ ಅಂಗಡಿಗಳಲ್ಲಿ ತಪಾಸಣೆ ನಡೆಸಿ, 2 ಅಂಗಡಿಗಳ ವಿರುದ್ಧ ಅಳತೆಯಲ್ಲಿ ವಂಚನೆ ನಡೆಸಿದ ಆರೋಪದಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. 21 ಕಿಲೋ ಅಕ್ಕಿ ನೀಡಬೇಕಾದಲ್ಲಿ 18 ಕಿಲೋ ಅಕ್ಕಿಯನ್ನುನೀಡಿದ ಮತ್ತು 4 ಕಿಲೋ ಗೋಧಿ ವಿತರಣೆ ನಡೆಸಬೇಕಾದಲ್ಲಿ 3 ಕಿಲೋ ನೀಡಿದ ಆರೋಪಗಳಲ್ಲಿ ಕೇಸು ದಾಖಲಿಸಲಾಗಿದೆ. ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿಸಾರ್ವಜನಿಕರಿಗೆ ರಾಜ್ಯ ಸರಕಾರ ವಿತರಣೆ ನಡೆಸುತ್ತಿರುವ ಪಡಿತರ ಸಾಮಾಗ್ರಿಗಳ ಅಳತೆಯಲ್ಲಿವಂಚನೆ ನಡೆಯುತ್ತಿರುವ ದೂರು ಲಭಿಸಿದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲೂ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


