HEALTH TIPS

ಇಂದಿನಿಂದ ಮೊಬೈಲ್ ವರ್ಕ್ ಶಾಪ್‍ಗಳ ಕಾರ್ಯಾರಂಭ


          ಕಾಸರಗೋಡು: ಅಗತ್ಯ ಸಾಮಾಗ್ರಿಗಳನ್ನು ಹೇರಿಕೊಂಡು ಜಿಲ್ಲೆಗೆ ಆಗಮಿಸುವ ಲಾರಿಗಳ ಸಣ್ಣಪುಟ್ಟ ದುರಸ್ತಿಗಾಗಿ ಕುಟುಂಬಶ್ರೀ ನೇತೃತ್ವದಲ್ಲಿ 4 ಮೊಬೈಲ್ ವರ್ಕ್ ಶಾಪ್ ಏಪ್ರಿಲ್ 4ರಿಂದ ಆರಂಭಗೊಳ್ಳಲಿದೆ. 2 ವರ್ಕ್ ಶಾಪ್ ಗಳು ಮಂಜೇಶ್ವರ ವಲಯದಲ್ಲೂ, 2ವರ್ಕ್ ಶಾಪ್‍ಗಳು ಕಾಞಂಗಾಡ್ ವಲಯದಲ್ಲೂ ಚಟುವಟಿಕೆ ನಡೆಸಲಿವೆ. ಪಂಕ್ಚರ್, ಟಯರ್ ಗೆ ಗಾಳಿ ತುಂಬುವುದು ಸಹಿತ ಸಣ್ಣಪುಟ್ಟ ದುರಸ್ತಿಗಳು ಈ ಮೂಲಕ ನಡೆಸಲಾಗುವುದು.
                ಲಾರಿ ಚಾಲಕರಿಗೆ ಆಹಾರ:
       ಅಗತ್ಯ ಸಾಮಾಗ್ರಿ ಹೇರಿಕೊಂಡು ಜಿಲ್ಲೆಗೆ ಆಗಮಿಸುವ ಲಾರಿಗಳ ಚಾಲಕರಿಗೆ ಮಿತ ಬೆಲೆಯಲ್ಲಿ ಆಹಾರ ಒದಗಿಸುವ ಯೋಜನೆ ಏಪ್ರಿಲ್ 4ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಬೆಳಗ್ಗಿನ ಉಪಹಾರಕ್ಕೆ ಇಡ್ಲಿ-ಸಾಂಬಾರ್, ಮಧ್ಯಾಹ್ನ ಚಿಕ್ಕನ್ ಬಿರಿಯಾಣಿ, ಮೀನು ಕರಿ ಸಹಿತ ಭೋಜನ, ರಾತ್ರಿ ಚಪಾತಿ ವೆಜ್‍ಕರಿ ಯಾ ಮಟನ್ ಕರಿ ಕುಟುಂಬಶ್ರೀ ಮೂಲಕ ಒದಗಿಸಲಾಗುವುದು. ಇದಕ್ಕಾಗಿ ತಲಾ ಒಂದು ವಾಹನ ತಲಪ್ಪಾಡಿಯಲ್ಲೂ, ಕಾಲಿಕಡವಿನಲ್ಲೂ ಕಾರ್ಯಾಚರಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries