ಕಾಸರಗೋಡು: ಕೋವಿಡ್ 19 ರೋಗ ಹೆಚ್ಚಳ ಹಿನ್ನೆಲೆಯಲ್ಲಿ ರೆಡ್ ಝೋನ್ ಆಗಿ ಘೋಷಿಸಲಾದ ಕಾಸರಗೋಡು ಜಿಲ್ಲೆಯ ಹಾಟ್ ಸ್ಪಾಟ್ ಆಗಿರುವ 6 ಗ್ರಾಮಪಂಚಾಯಿತಿ ಮತ್ತು 2 ನಗರಸಭೆಗಳಲ್ಲಿ ಲಾಕ್ ಡೌನ್ ಆದೇಶ ಕಠಿಣ ರೂಪದಲ್ಲೇ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು. ಈ ಪ್ರದೇಶಗಳಲ್ಲಿ ನಿಗಾ ಪ್ರಬಲವಾಗಿ ಮುಂದುವರಿಯಲಿದೆ. ಸಿ.ಆರ್.ಪಿ.ಸಿ. 144 ಪ್ರಕಾರ ಮಾ.22 ರಿಂದ ಜಿಲ್ಲೆಯಲ್ಲಿ ಘೋಷಿಸಲಾದ ನಿಷೇದಾಜ್ಞೆ ಕಡ್ಡಾಯವಾಗಿಯೇ ಮುಂದುವರಿಯಲಿದೆ. ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಕೂಡದು. ಕಾಸರಗೋಡು, ಕಾಞಂಗಾಡ್ ನಗರಸಭೆಗಳಲ್ಲಿ, ಚೆಮ್ನಾಡ್, ಮುಳಿಯಾರು, ಚೆಂಗಳ, ಮೊಗ್ರಾಲ್ ಪುತ್ತೂರು,ಉದುಮಾ, ಮಧೂರು ಗ್ರಾಮಪಂಚಾಯತ್ ಗಳನ್ನು ಆರೋಗ್ಯ ಇಲಾಖೆ ಹಾಟ್ ಸ್ಪಾಟ್ ಗಳಾಗಿ ಘೋಷಿಸಿದೆ. ಈ ಪ್ರದೇಶಗಳಲ್ಲಿ ಯಾವುದೇ ವಿನಾಯಿತಿಗಳಿಲ್ಲ. ಹಾಟ್ ಸ್ಪಾಟ್‍ಗಳಲ್ಲದ ಪಂಚಾಯಿತಿಗಳಲ್ಲಿ ಕೃಷಿ,ನಿರ್ಮಾಣ, ಶುಚೀಕರಣ ಇತ್ಯಾದಿಗಳಲ್ಲಿ ರಾಜ್ಯ ಸರ್ಕಾರದ ಸಲಹೆ-ಸೂಚನೆಗ¼ನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಪುನಾರಂಭಿಸಲು ಸಭೆ ತೀರ್ಮಾನ ಕೈಗೊಂಡಿದೆ. ನೀರಾವರಿ ಯೋಜನೆಗಳು, ಕುಡಿಯುವ ನೀರು ಯೋಜನೆಗಳು, ಸರ್ಕಾರಿ ಯೋಜನೆಗಳ ಅಂಗವಾಗಿ ಕಟ್ಟಡನಿರ್ಮಾಣ, ಲೋಕೋಪಯೋಗಿ ಇಲಾಖೆಯ ಯೋಜನೆಗಳು ಇದರಲ್ಲಿ ಸೇರಿವೆ. ಕೃಷಿ ಚಟುವಟಿಕೆಗಳನ್ನು ಪುನರಾರರಂಭಿಸಲುನಿರ್ಧರಿಸಲಾಗಿದೆ.
ಹೊಸ ಪ್ರಕರಣವಿಲ್ಲ:
ಜಿಲ್ಲೆಯಲ್ಲಿ ಗುರುವಾರವೂ ಯಾವುದೇ ಕೋವಿಡ್ ಸೋಂಕು ಖಚಿತ ಪ್ರಕರಣಗಳಿಲ್ಲ.ಗುರುವಾರ ಜಿಲ್ಲೆಯಲ್ಲಿ 6 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇವರಲ್ಲಿ 4 ಮಂದಿಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಿಂದ, ಇಬ್ಬರು ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದಬಿಡುಗಡೆಹೊಂದಿದ್ದಾರೆ

