HEALTH TIPS

ರಾಷ್ಟ್ರೀಯ ಹೆದ್ದಾರಿ ಮರು ಡಾಮರೀಕರಣಕ್ಕೆ ನಿಧಿ ಮಂಜೂರು

      ಕಾಸರಗೋಡು: ಕೋವಿಡ್ ಕಾರಣ ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ ಮರು ಡಾಮರೀಕರಣ(ರೀ ಟಾರಿಂಗ್) ಕಾಮಗಾರಿಗೆ ಮತ್ತೆ ಜೀವಕಳೆ ತುಂಬುವ ಯತ್ನ ಸಾಗುತ್ತಿದ್ದು, ಕುಂಬಳೆ ಸಮೀಪದ ಪೆರ್ವಾಡಿನಿಂದ ಕಾಸರಗೋಡು ಅಣಂಗೂರಿನ ವರೆಗೆ ನಿಧಿ ಅನುಮತಿಸಿರುವುದಾಗಿ ತಿಳಿದುಬಂದಿದೆ.
    ಈಗ ಬಾಕಿ ಉಳಿದಿರುವ ಮರು ಡಾಮರೀಕರಣಕ್ಕಾಗಿ 5 ಕೋಟಿ 30 ಲಕ್ಷ ರೂ.ಗಳನ್ನು ಅನುಮತಿಸಿರುವುದಾಗಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.
    ಪೆರ್ವಾಡ್ ನಿಂದ ಕರಂದಕ್ಕಾಡ್ ವರೆಗಿನ ಮರು ಡಾಮರೀಕರಣಕ್ಕೆ 350 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ಹಾಗೂ ಕರಂದಕ್ಕಾಡಿನಿಂದ ಅನಂಗೂರಿನ ವರೆಗಿನ ಕಾಮಗಾರಿಗೆ ಪ್ಲಡ್ ಡ್ಯಾಮೇಜ್ ರಿಫೈಯರಿಂಗ್ ವಿಭಾಗದಿಂದ 180 ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರ ನೀಡಲಿದೆ. ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆ ಪ್ರಕ್ರಿಯೆಗಳು ಶೀಘ್ರ ಆರಂಭಗೊಳ್ಳಲಿದೆ. ಮಳೆಗಾಲ ಆರಂಭಗೊಳ್ಳುವ ಮೊದಲು ಮರು ಡಾಮರೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿರುವುದಾಗಿ ಅಧಿಕೃತರು ತಿಳಿಸಿರುವರೆಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries