HEALTH TIPS

ಕೋವಿಡ್ ಸಂಕಷ್ಟದ ನಡುವೆಯೂ ಪರಿಹಾರದೊಂದಿಗೆ ಕೃಷಿ ಇಲಾಖೆ ಸಕ್ರಿಯ


      ಕಾಸರಗೋಡು:  ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಎಲ ವಲಯಗಳಂತೆ ಕೃಷಿ ಕ್ಷೇತ್ರವೂ ಅನುಭವಿಸುತ್ತಿರುವ ದುರಿತಗಳಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಕ್ರಿಯವಾಗಿ ರಂಗದಲ್ಲಿದೆ. 
      ಜಿಲ್ಲೆಯಲ್ಲಿ ಭತ್ತ, ತರಕಾರಿ, ಹಣ್ಣುಗಳು ಇತ್ಯಾದಿಗಳ ಕೊಯ್ಲು, ಸಂಗ್ರಹ ಮತ್ತು ವಿತರಣೆ ವಲಯಗಳಲ್ಲಿ ಕೃಷಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಇಲ್ಲಿ ಯತ್ನಿಸಲಾಗುತ್ತಿದೆ. ಕುಂಬಳೆ ಗ್ರಾಮಪಂಚಾಯತ್ ನ ಕಿದೂರು, ಮಧೂರು ಗ್ರಾಮಪಂಚಾಯತ್, ನೀಲೇಶ್ವರ.ಮಡಿಕೈ ಗ್ರಾಮಪಂಚಾಯತ್ ನ ಆಲಾಯಿ, ಕುಂಡೇಯನ್ವಯಲ್, ರಾಕೋಲ್ ಪ್ರದೇಶಗಳ ಭತ್ತದ ಕೊಯ್ಲು ಸಮಸ್ಯೆಗಳನ್ನು ಪರಿಹರಿಸಲಾಗಿದೆ.
     ತರಕಾರಿ, ಹಣ್ಣುಗಳ ಸಂಗ್ರಹ ಮತ್ತು ವಿತರಣೆ ನಿಟ್ಟಿನಲ್ಲಿ ಕಾಸರಗೋಡು ಕೃಷಿ ಇಲಾಖೆ ವ್ಯಾಪ್ತಿಯ 19 ಮಾರ್ಕೆಟ್ ಗಳನ್ನು (ಇಕೋ ಶಾಪ್ ಗಳು, ಬಿ.ಎಲ್.ಎಫ್.ಒ. ಮಾರ್ಕೆಟ್ ಗಳು, ವೀಕ್ಲಿ ಮಾರ್ಕೆಟ್ ಗಳು, ಎ ಗ್ರೇಡ್ ಕ್ಲಸ್ಟರ್ ಮರ್ಕೆಟ್ ಗಳು ಇತ್ಯಾದಿ) ತೆರೆದು ಕಾರ್ಯಾಚರಿಸಲಾಗುತ್ತಿದೆ. ಈ ಮೂಲಕ ಪ್ರತಿದಿನ 2 ಟನ್ ತರಕಾರಿ ಮತ್ತು ಹಣ್ಣುಗಳನ್ನು ಸಂಗ್ರಹಿಸಿ, ವಿತರಣೆ ನಡೆಸಲಾಗುತ್ತಿದೆ.
       ಅನನಾಸು ಸಂಗ್ರಹ ಮತ್ತು ವಿತರಣೆ ಸಂಬಂಧ ಬಳಾಲ್ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ 30 ಟನ್ ಅನಾನಾಸು ಸಂಗ್ರಹಿಸಿ ವಿತರಣೆ ನಡೆಸಲಾಗಿದೆ. ರಖಂ ವ್ಯಾಪಾರಿಗಳೊಂದಿಗೆ ವಾಟ್ಸ್ ಆಪ್ ಗುಂಪು ರಚಿಸಿ ತರಕಾರಿ, ಹಣ್ಣು ಸಂಗ್ರಹಿಸಿ, ವಿತರಣೆ ನಡೆಸಲಾಗುತ್ತಿದೆ.
     ಲಾಕ್ ಡೌನ್ ಅವಧಿಯಲ್ಲಿ ಜೀವನಿ ಯೋಜನೆ ಮೂಲಕ ಜಿಲ್ಲೆಯಲ್ಲಿ 32716 ತರಕಾರಿ ಬೀಜಗಳು, 9 ಲಕ್ಷ ತರಕಾರಿ ಸಸಿಗಳು 35140 ದೀರ್ಘಾವಧಿ ಬಾಳುವ ತರಕಾರಿ ಸಸಿಗಳು ವಿತರಣೆಗೆ ಸಿದ್ಧವಾಗಿವೆ. ಇವುಗಳಲ್ಲಿ 21847 ತರಕಾರಿ ಬೀಜಗಳು, 21000 ತರಕರಿ ಸಸಿಗಳು, 7585 ದೀರ್ಘಾವಧಿ ತರಕಾರಿ ಸಸಿಗಳು ವಿತರಣೆ ಗೊಂಡಿವೆ.
     ರಾಜ್ಯ ಸರಕಾರದ ಜನಪರ ಯೋಜನೆ ಸಮುದಾಯ ಅಡುಗೆಮನೆಯಲ್ಲಿ ಕೃಷಿ ಇಲಾಖೆಯೂ ಸಕ್ರಿಯವಾಗಿದೆ. ತೆಂಗಿನ ಕಾಯಿ ಸಹಿತ ಸ್ಥಳೀಯ ತರಕಾರಿಗಳನ್ನು ಸಂಗ್ರಹಿಸಿ ಇಲ್ಲಿ ವಿತರಿಸಲಾಗುತ್ತಿದೆ. ಇದರಲ್ಲಿ ಶೇ 80 ಕೂಡ ಉಚಿತವಾಗಿ ನಡೆಯುತ್ತಿದೆ.
        ಜಿಲ್ಲೆಯ 8942 ಕೃಷಿಕರಿಗಾಗಿ ಅಕ್ಟೋಬರ್, ನವೆಂಬರ್ ತಿಂಗಳ ಪಿಂಚಣಿ ರೂಪದಲ್ಲಿ 21460800 ರೂ. ವಿತರಿಸಲಾಗಿದೆ. ಡಿಸೆಂಬರ್ ನಿಂದ ಏಪ್ರಿಲ್ವರೆಗಿನ ಪಿಂಚಣಿ ಶೀರ್ಘರದಲ್ಲೇ ವಿತರಿಸಲಾಗುವುದು. ಕೋವಿಡ್ 19 ಪ್ರತಿರೋಧ, ಸಮಸ್ಯೆ ಪರಿಹಾರ ಪ್ರಕ್ರಿಯೆಯಲ್ಲಿ ಕೃಷಿ ಇಲಾಖೆ ಸಕ್ರಿಯವಾಗಿದೆ ಎಂದು ಪ್ರಧಾನ ಕೃಷಿ ಅಧಿಕಾರಿ ಕೆ.ಸಜಿನಿ ಮೋಳ್ ತಿಳಿಸಿದರು.
                  ಚಿತ್ರ ಮಾಹಿತಿ: ಕಾಞಂಗಾಡ್ ನಗರಸಭೆ ಕರಷಿಭವನಕ್ಕೆ ಜೀವನಿ ಯೋಜನೆ ಮೂಲಕ ತರಕಾರಿ ವಿತರಿಸಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries