ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣ ವಲಯಗಳಲ್ಲಿ ಪೆÇಲೀಸ್ ಜಾರಿಗೊಳಿಸಿದ್ದ ಡಬ್ಬಲ್ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಇಂದಿನಿಂದ(ಏ.11) ಟ್ರಿಪ್ಪಲ್ ಲಾಕ್ ಡೌನ್ ಏರ್ಪಡಿಸಲಾಗಿದೆ. ಪಳ್ಳಿಕ್ಕರೆ, ಉದುಮಾ, ಚೆನಾಡ್, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ಗಳಲ್ಲೂ, ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲೂ ಪೆÇಲೀಸರು ಟ್ರಿಪ್ಪಲ್ ಲಾಕ್ ಡೌನ್ ಏರ್ಪಡಿಸಲಾಗಿದೆ.
ಕೋವಿಡ್ 19 ನಿಯಂತ್ರಣ ವಲಯಗಳನ್ನು ಕಾಸರಗೋಡು,ವಿದ್ಯಾನಗರ, ಮೇಲ್ಪರಂಬ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 5 ವಲಯಗಳಾಗಿಸಿ ಟ್ರಿಪ್ಪಲ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಮನೆಗಳಿಂದ ಹೊರಗಿಳಿಯುವವರನ್ನು ಬಂಧಿಸಲು ಫ್ಲೈಯಿಂಗ್ ಸ್ಕ್ವಾಡ್ ಮತ್ತು ಬೈಕ್ ಪೆಟ್ರೋಲಿಂಗ್ ,ಡ್ರೋನ್ ನಿಗಾ ಪ್ರಬಲಗೊಳಿಸಲಾಗಿದೆ. ಕೋವಿಡ್ 19 ನಿಯಂತ್ರಣ ವಲಯಗಳಲ್ಲಿ ತಲಾ 10 ಮನೆಗಳನ್ನು ಕೇಂದ್ರೀಕರಿಸಿ ಪೆÇಲಿಸ್ ಭದ್ರತೆ ಬಿಗಿಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಜನ ಮನೆಗಳಿಂದ ಹೊರಗಿಳಿಯಲು ಅನುಮತಿ ಇಲ್ಲ, ಹೊರಗಿಳಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾದೀತು. ಆದೇಶ ಉಲ್ಲಂಘಿಸುವವರನ್ನು ಸರಕಾರಿ ನಿಗಾ ಕೇಂದ್ರಗಳಲ್ಲಿ ದಾಖಲಿಸಿ ಇವರ ವಿರುದ್ಧ ಕಠಿಣ ಕಾನೂನು ಕೈಗೊಳ್ಳಲಾಗುವುದು.
ಕೋವಿಡ್ 19 ನಿಯಂತ್ರಣ ವಲಯಗಳನ್ನು ಝೋನ್ ಗಳು:
ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚುವರಿ ಕಠಿಣ ಕ್ರಮಗಳನ್ನು ಪೆÇಲೀಸರು ಜಾರಿಗೊಳಿಸಿದ್ದಾರೆ. ಇದರ ಅಂಗವಾಗಿ ಕೋವಿಡ್ 19 ನಿಯಂತ್ರಣ ವಲಯಗಳನ್ನು 5 ಝೋನ್ ಗಳಾಗಿ ವಿಂಗಡಿಸಲಾಗಿದೆ. ಝೋನ್ ಒಂದರಲ್ಲಿ ತಳಂಗರೆ, ನೆಲ್ಲಿಕುಂಜೆ ಪ್ರದೇಶಗಳು, ಝೋನ್ ಎರಡರಲ್ಲಿ ಎರಿಯಾಲ್, ಮಂಜತ್ತಡ್ಕ ಪ್ರದೇಶಗಳು, ಝೋನ್ ಮೂರರಲ್ಲಿ ಅಣಂಗೂರು,ಕೊಲ್ಲಂಪಾಡಿ, ಚಾಲ ಪ್ರದೇಶಗಳು, ಝೋನ್ ನಾಲ್ಕರಲ್ಲಿ ಚೆರ್ಕಳ, ಚೆಂಗಳ, ಬೇವಿಂಜೆ, ತೆಕ್ಕಿಲ್ ಫೆರಿ, ಚೇರೂರು ಪ್ರದೇಶಗಳು, ಝೋನ್ 5ರಲ್ಲಿ ಕಳನಾಡು, ಚೆಂಬರಿಕ್ಕ ಬಝಾರ್, ನಲಾಂವಾದುಕಲ್, ಉದುಮಾ, ಮೂತ್ತಲ ಮಾಂಗಾಡ್, ಮುಲ್ಲಚ್ಚೇರಿ, ಇಯ್ಯಾಳ ಎಂಬ ಪ್ರದೇಶಗಳನ್ನು ಅಳವಡಿಸಲಾಗಿದೆ.
ಈ ಪ್ರದೇಶಗಳಲ್ಲಿ ಮನೆಗಳಿಂದ ಹೊರಗಿಳಿಯುವವರನ್ನು ಬಂಧಿಸುವ ನಿಟ್ಟಿನಲ್ಲಿ ವಿವಿಧ ಝೋನ್ ಗಳಲ್ಲಿ ಫ್ಲೈ ಯಿಂಗ್ ಸ್ಕ್ವಾ ಡ್ ,ಬೈಕ್ ಪೆಟ್ರೋಲಿಂಗ್, ಡ್ರೋನ್ ನಿಗಾ ಪ್ರಬಲಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರತಿ 10 ಮನೆಗಳನ್ನು ಕೇಂದ್ರೀಕರಿಸಿ ಒಬ್ಬ ಪೆÇಲೀಸ್ ಪೂರ್ಣಾವಧಿ ಕಾವಲಿರುವರು.
ತಳಂಗರೆಯಲ್ಲಿ ಐ.ಜಿ. ವಿಜಯ್ ಸಖಾರೆ ಅವರು ಟ್ರಿಪ್ಪಲ್ ಲಾಕ್ ಡೌನ್ ಆದೇಶಕ್ಕೆ ಚಾಲನೆ ನೀಡಿದ್ದಾರೆ. ಉತ್ತರ ವಲಯ ಐ.ಜಿ. ಅಶೋಕ್ ಯಾದವ್, ಎಸ್.ಪಿ.ಗಳಾದ ಪಿ.ಎಸ್.ಸಾಬು, ಡಿ.ಶಿಲ್ಪಾ, ಡಿ.ವೈ.ಎಸ್.ಪಿ. ಬಾಲಕೃಷ್ಣನ್, ಎಸ್.ಐ.ನಳಿನಾಕ್ಷನ್ ನೇತೃತ್ವ ವಹಿಸಿದ್ದರು.

