ಪೆರ್ಲ: ರಾಜ್ಯ ಸರ್ಕಾರದ ಸಹಾಯದೊಂದಿಗೆ ಎಣ್ಮಕಜೆ ಪಂಚಾಯತಿ ಹಾಗೂ ಸಿ ಡಿ ಎಸ್ ನೇತೃತ್ವದಲ್ಲಿ ಪೆರ್ಲ ಅಂಗನವಾಡಿಯಲ್ಲಿ ಕಾರ್ಯಾಚರಿಸುವ ಸಮುದಾಯ ಅಡುಗೆ (ಕಮ್ಯೂನಿಟಿ ಕಿಚನ್) ಗೆ ತರಕಾರಿ, ತೆಂಗಿನಕಾಯಿ,ಬಾಳೆಕಾಯಿ ನೀಡಿ ಗುಣಾಜೆ ವಾರ್ಡ್ ಕೃಷಿಕರು ಮಾದರಿಯಾದರು.
ಗ್ರಾ.ಪಂ. ಸದಸ್ಯ ಸಿದ್ದೀಕ್ ವಳಮೊಗರು ಅವರು ನೇತೃತ್ವದಲ್ಲಿ ಕೃಷಿ ಉತ್ಪನ್ನಗಳನ್ನು ಕೃಷಿಕರಿಂದ ಸಂಗ್ರಹಿಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದ ವೈ, ಕಾರ್ಯದರ್ಶಿ ಮರಿನ ಗೊರೊತಿ ಅವರಿಗೆ ಹಸ್ತಾಂತರಿಸಿದರು. ಸಿ ಡಿ ಎಸ್ ಉಪಾಧ್ಯಕ್ಷೆ ಶಶಿಕಲಾ, ಗ್ರಾ.ಪಂ. ಮಾಜಿ ಸದಸ್ಯ ರವಿ ಕೆ, ರಾಮಚಂದ್ರ ಮೊಳಕ್ಕಾಲ್ ಮೊದಲಾದವರು ಉಪಸ್ಥಿತರಿದ್ದರು.


