ಪೆರ್ಲ: ಕೋವಿಡ್ 19 ಪ್ರತಿರೋಧದ ಭಾಗವಾಗಿ ಕೇರಳ ಸರ್ಕಾರದ ಸಹಾಯದೊಂದಿಗೆ ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಸಿಡಿಎಸ್ ಸಂಯುಕ್ತಾಶ್ರಯದಲ್ಲಿ ಪೆರ್ಲ ಅಂಗನವಾಡಿ ಕೇಂದ್ರದಲ್ಲಿ ಕಮ್ಯೂನಿಟಿ ಕಿಚನ್ ಯಶಸ್ವಿಯಾಗಿ ನಡೆಯುತ್ತಿರುವುದು ಜನಸಾಮಾನ್ಯರಿಗೆ, ಕಾರ್ಮಿಕರಿಗೆ, ಅನ್ಯರಾಜ್ಯದ ಅತಿಥಿ ಕಾರ್ಮಿಕರಿಗೆ ವರದಾನವಾಗಿ ಮಾರ್ಪಟ್ಟಿದೆ.
ಗ್ರಾಮ ಪಂಚಾಯತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಹಾಗೂ ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಮ್ಯೂನಿಟಿ ಕಿಚನ್ ಕೇಂದ್ರ ಕಾರ್ಯಪ್ರವೃತವಾಗಿದೆ. ಗ್ರಾಮ ಪಂಚಾಯತಿನ ತೀರ್ಮಾನದಂತೆ ಅಶ್ರಯ ವಿಭಾಗದವರಿಗೂ, ಅನ್ಯರಾಜ್ಯದ ಕೂಲಿ ಕಾರ್ಮಿಕರಿಗೆ ಉಚಿತ ಊಟವನ್ನು ವಿತರಿಸಲಾಗುತ್ತಿದೆ. ಶಾರೀರಿಕ ಸಮಸ್ಯೆಗಳಿಂದ ಮನೆಯಲ್ಲಿಯೇ ಇರುವ ರೋಗಿಗಳಿಗೆ ಉಚಿತವಾಗಿ ಆಯಾಯ ವಾರ್ಡ್ ನ ಸ್ವಯಂ ಸೇವಕರು ಊಟವನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮ ಪಂಚಾಯತಿ ಅಧಿಕೃತರು ಹಾಗೂ ಅರೋಗ್ಯ ಇಲಾಖೆ ಸಿಬ್ಬಂದಿಗಳು ಸಹಕಾರ ನೀಡುತ್ತಿದು, ಜನ ಸಾಮಾನ್ಯರು ಕಮ್ಯೂನಿಟಿ ಕಿಚನ್ ನ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


