ಕಾಸರಗೋಡು: ಜಿಲ್ಲೆಯಲ್ಲಿ ತರಕಾರಿ ಬೀಜ ಮತ್ತು ಸಸಿಗಳ ವಿತರಣೆ ನಡೆಸಲಾಗುವುದು. ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಅವಧಿಯಲ್ಲಿ ಹಿತಿಲಲ್ಲಿ ತರಕಾರಿ ಕೃಷಿ ನಡೆಸುವುದನ್ನು ಬೆಂಬಲಿಸುವ ನಿಟ್ಟಿನಲ್ಲಿಈ ಯೋಜನೆ ಜಾರಿಗೊಳ್ಳಲಿದೆ. ಕೃಷಿ ಅಭಿವೃದ್ಧಿ-ಕೃಷಿಕ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮಪಂಚಾಯತ್ ಗಳ ಸಹಕರದೊಂದಿಗೆ, ಕುಟುಂಬಶ್ರೀ, ಸ್ವಯಂಸೇವಾ ಸಂಘಟನೆಗಳು, ಕ್ಲಬ್ ಗಳು, ಕ್ರಿಯಾಸೇನೆ ಇತ್ಯಾದಿಗಳೊಂದಿಗೆ ಸೇರಿ ಇವನ್ನು ವಿತರಣೆ ನಡೆಸಲಾಗಗುವುದು. ಈ ನಿಟ್ಟಿನಲ್ಲಿ 9 ಲಕ್ಷ ತರಕಾರಿ ಸಸಿಗಳು, 32 ಸಾವಿರ ತರಕಾರಿ ಬೀಜಗಳು, 35 ಸಾವಿರ ದೀರ್ಘಾವಧಿ ಬಾಳುವ ತರಕಾರಿ ಸಸಿಗಳು ಜಿಲ್ಲೆಯ ಕೃಷಿಭವನಗಳಲ್ಲಿ ಸಿದ್ಧವಾಗಿವೆ. "ಜೀವನಿ-ನಮ್ಮ ಕೃಷಿ ನಮ್ಮ ಆರೋಗ್ಯ" ಎಂಬ ತರಕಾರಿ ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬೀಜ ಮತ್ತು ಸಸಿಗಳನ್ನು ಉತ್ಪಾದಿಸಲಾಗುತ್ತಿದೆ.
ತರಕಾರಿ ಬೀಜ, ಸಸಿ ವಿತರಣೆ
0
ಏಪ್ರಿಲ್ 08, 2020