ಕಾಸರಗೋಡು: ಆಂಬುಲೆನ್ಸ್ ಮೂಲಕ ರೋಗಿಗಳನ್ನು ಕಾಸರಗೋಡಿನಿಂದ ಮಂಗಳೂರಿಗೆ ಕರೆದೊಯ್ಯುವ ವೇಳೆ ಕೆಲವು ನಿಬಂಧನೆಗಳೊಂದಿಗೆ ಗಡಿಪ್ರದೇಶ ತಲಪ್ಪಾಡಿಯಲ್ಲಿ ತೆರಳಲು ಕರ್ನಾಟಕ ಸರಕಾರ ಅನುಮತಿ ನೀಡಿದ್ದು, ಮೆಡಿಕಲ್ ಸರ್ಟಿಫಿಕೆಟ್ ನೀಡುವ ನಿಟ್ಟಿನಲ್ಲಿ ವಿಶೇಷ ಆದೇಶದೊಂದಿಗೆ ವೈದ್ಯಾಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಸಹಾಯಕ ಸರ್ಜನ್‍ಗಳಾದ ಡಾ.ಹರಿಕೃಷ್ಣನ್(9496820103), ಡಾ.ಸನೂಜ್(9496333577)ದಿನ ಬಿಟ್ಟು ದಿನ ರಾತ್ರಿ 8 ರಿಂದ ಬೆಳಗ್ಗೆ 8 ಗಂಟೆವರೆಗೆ, ಡಾ.ನಿಷಾ (8592812615) ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆ ವರೆಗೆ, ಡಾ.ಮೈಥಿಲಿ(8304812407) ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಸರ್ಟಿಫಿಕೆಟ್ ನೀಡುವ ವೈದ್ಯಾಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರಿಂದ ನೇಮಕಗೊಂಡವರು. ಇವರ ಸೇವೆ ತಲಪ್ಪಾಡಿಯಲ್ಲಿ ಲಭ್ಯವಿರುವುದು. ಇಲ್ಲಿ 108 ಆಂಬುಲೆನ್ಸ್ ಸೇವೆಯೂ ಲಭ್ಯವಿರುವಂತೆ ಆದೇಶ ನೀಡಲಾಗಿದೆ.

