ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಾರಿಗೊಳಿಸಿರುವ ಲಾಕ್ ಡೌನ್ ಆದೇಶ ಸಲುವಾಗಿ ಜಿಲ್ಲೆಯಲ್ಲಿ ರಚಿಸಿದ ಸಪ್ಲೈ ಚೈನ್ ಮೆನೇಜ್ ಮೆಂಟ್ ಸಮಿತಿ ಸಭೆ ಮತ್ತು ಆಹಾರ , ಅನಿವಾರ್ಯ ಸಾಮಾಗ್ರಿಗಳ ಪೂರೈಕೆ ಸಭೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು.
ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನೇತೃತ್ವ ವಹಿಸಿದ್ದರು. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪೇಷೆಂಟ್ ಹಾಸ್ಪಿಟಲ್ ಮೆನೇಜ್ ಮೆಂಟ್ ಸಭೆ:
ಪೇಷೆಂಟ್ ಹಾಸ್ಪಿಟಲ್ ಮೆನೆಜ್ ಮೆಂಟ್ ಸಮಿತಿ ಸಭೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು. ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮನೋಜ್, ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ. ರಾಮನ್ ಸ್ವಾತಿ ವಾಮನ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ರಸ್ತೆ ಸಾರಿಗೆ ಅಧಿಕಾರಿ ಟಿ.ಆರ್.ಅಹಮ್ಮದ್ ಕಬೀರ್, ಜಿಲ್ಲಾ ನಾಗರೀಕ ಪೂರೈಕೆ ಅಧಿಕಾರಿ ವಿ.ಕೆ.ಶಶೀಂದ್ರನ್, ವಲಯ ಕಂದಾಯಾಧಿಕಾರಿ(ಎನ್ ಫೆÇೀರ್ಸ್ ಮೆಂಟ್) ಮೋಹನದಾಸ್ ಎಂ., ವಿ.ಎ. ವೈಕುಂಠನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್, ಜಿಲ್ಲಾ ವೈದ್ಯಾಧಿಕಾರಿ ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಕಾಸರಗೋಡು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ರಾಜಾರಾಂ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಮೊದಲಾವರು ಉಪಸ್ಥಿತರಿದ್ದರು.

