ಕಾಸರಗೋಡು: ಕೋವಿಡ್ 19 ಹಿನ್ನೆಲೆಯಲ್ಲಿ ಎ.ಎ.ವೈ. ಮತ್ತು ಆದ್ಯತೆ ಪಡಿತರ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ಆಹಾರ ಧಾನ್ಯ ಗಳನ್ನು ವಿತರಿಸುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕೇಂದ್ರ ಸರಕಾರದಿಂದ ಲಭಿಸುವ ಅಧಿಕ ಪಾಲು ಏ.21ರಿಂದ ಎ.ಎ.ವೈ.ಆದ್ಯತೆ ಪಡಿತರ ಚೀಟಿಯ ಮಂದಿಗೆ ಒಬ್ಬ ಸದಸ್ಯನಿಗೆ ತಲಾ 5 ಕಿಲೋ ಅಕ್ಕಿಯಂತೆ ವಿತರಣೆ ನಡೆಸಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿದ 17 ಧಾನ್ಯಗಳು ಹೊಂದಿರುವ ಒಂದು ಸಾವಿರ ರೂ. ಮೌಲ್ಯದ ಉಚಿತ ಬಹುಧಾನ್ಯ ಕಿಟ್ ಮೊದಲ ಹಂತದಲ್ಲಿ ಅಂತ್ಯೋದಯ ವಿಭಾಗದ ಕುಟುಂಬಗಳಿಗೆ ಏ.9ರಿಂದ ಪಡಿತರ ಅಂಗಡಿಗಳಲ್ಲಿ ವಿತರಣೆ ನಡೆಸಲಾಗುವುದು ಎಂದು ಅವರು ಹೇಳಿರುವರು.

