ಕಾಸರಗೋಡು: ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಡಯಾಲಿಸಿಸ್ ನಡೆಸುವ ನಿಟ್ಟಿನಲ್ಲಿ ಮಂಗಳೂರು, ಕಣ್ಣೂರು ಪ್ರದೇಶಗಳ ಆಸ್ಪತ್ರೆಗಳಿಗೆ ತೆರಳಲಾಗದೇ ಇರುವ ರೋಗಿಗಳಿಗಾಗಿ ಕಾಸರಗೋಡು ಜಿಲ್ಲೆಯ ಮೂರು ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆ, ತ್ರಿಕರಿಪುರ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ 2 ಶಿಫ್ಟ್ ಗಳಲ್ಲದೆ, ಹೆಚ್ಚುವರಿ ಒಂದು ಶಿಫ್ಟ್ ಏರ್ಪಡಿಸಲಾಗಿದೆ. ಇದು ನೂತನವಾಗಿ ಇಲ್ಲಿಗೆ ಆಗಮಿಸುವವರಿಗಾಗಿ ಮೀಸಲಿರಿಸಲಾಗಿದೆ. ಶಿಫ್ಟ್ ಒಂದರಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ತಲಾ 8 ಮಂದಿಗೆ, ತ್ರಿಕರಿಪುರ ಆಸ್ಪತ್ರೆಯಲ್ಲಿ 5 ಮಂದಿಗೆ ಅವಾಶಗಳಿವೆ. ಆಸ್ಪತ್ರೆಗಳ ಡಯಾಲಿಸಿಸ್ಯೂನಿಟ್ಗಳಸಿಬ್ಬಂದಿಯಲ್ಲದೆ, ತಾಂತ್ರಿಕ ಪರಿಣತಿಯಿರುವ ಸ್ವಯಂ ಸೇವಕರ ಸೇವೆಯೂ ಇಲ್ಲಿದೆ. ಡಯಾಲಿಸಿಸ್ ಅಗತ್ಯವಿರುವವರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಕಚೇರಿ ಯ ನಿಯಂತ್ರಣ ಘಟಕವನ್ನು ಸಂಪರ್ಕಿಸಬೇಕು.
ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಲಭ್ಯ-ಇಲ್ಲಿದೆ ಮಾಹಿತಿ
0
ಏಪ್ರಿಲ್ 08, 2020