HEALTH TIPS

ಪತ್ರ ಸಂಚಯಿಕ: ಕೃತಿಗಳ ಆಹ್ವಾನ

         
            ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಕೇರಳ ಇಡೀ ಜಗತ್ತಿಗೆ ಮಾದರಿಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ನಡೆದ ಚಟುವಟಿಕೆಗಳ ಪರಿಣಾಮ ಕೊರೋನಾವನ್ನು ಗಮನಾರ್ಹ ರೀತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಇದನ್ನು ದಾಖಲಿಸುವ ನಿಟ್ಟಿನಲ್ಲಿ ಮತ್ತು ಲಾಕ್ ಡೌನ್ ಆದೇಶ ಜಾರಿಗೊಂಡಿರುವ ವೇಳೆ ಜನತೆಯ ಸಹಭಾಗಿತ್ವ ನಡೆಸುವ ನಿಟ್ಟಿನಲ್ಲಿ " ಪತ್ರ ಸಂಚಯಿಕ" (ನ್ಯೂಸ್ ಲೆಟರ್ ಸಂಗ್ರಹ) ಒಂದನ್ನು ಪ್ರಕಟಿಸಲಾಗುವುದು.
     ಕಾಸರಗೋಡು ಪಂಚಾಯತಿ ಡೆಪ್ಯೂಟಿ ಡೈರೆಕ್ಟರ್ ಕಚೇರಿ ನೇತೃತ್ವದಲ್ಲಿ ಪ್ರಕಟಿಸುವ ಈ ಸಂಚಯಿಕದಲ್ಲಿ ಕಾಸರಗೋಡು ಜಿಲ್ಲೆಯ 38 ಗ್ರಾಮಪಂಚಾಯತ್ ಗಳ ಸಹಭಾಗಿತ್ವ ಇರುವುದು. ಕನ್ನಡ, ತುಳು, ಮಲೆಯಾಳಂ ಭಾಷೆಗಳಲ್ಲಿ ಲೇಖನ, ಕಥೆ, ಕವಿತೆ ಇತ್ಯಾದಿಗಳನ್ನು ಈ ಹೊತ್ತಗೆಯಲ್ಲಿ ಪ್ರಕಟಿಸಲಿದ್ದು, ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ವೇಳೆ ಲೇಖನ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಿಗೆ ಸಂಬಂಧಿಸಿದ್ದಿರಬೇಕು. ಕಥೆ ಮತ್ತು ಕವಿತೆಗೆ ತಮ್ಮ ಇಷ್ಟದ ವಸ್ತು ಆರಿಸಿಕೊಳ್ಳಬಹುದು. ಸಾರ್ವಜನಿಕರ ಜೊತೆಗೆ ಜನಪ್ರತಿನಿಧಿಗಳೂ, ಸರಕಾರಿ ಸಿಬ್ಬಂದಿ, ಸಾರ್ವಜನಿಕ ಸಂಸ್ಥೆಗಳ ಸಿಬ್ಬಂದಿಯೂ ತಮ್ಮ ಕೃತಿಗಳನ್ನು ನೀಡಿಬಹುದು. ಬರಹಗಾರರು ಕೃತಿಯ ಜೊತೆಗೆ ತಮ್ಮಹೆಸರು, ವಯಸ್ಸು, ಪೂರ್ಣ ವಿಳಾಸ, ಯಾವ ಗ್ರಾಮಪಂಚಾಯತ್ ವ್ಯಾಪ್ತಿಯವರು ಎಂಬ ಮಾಹಿತಿಯ ಜೊತೆಗೆ ಒಂದು ಭಾವಚಿತ್ರವನ್ನೂ ಸಲ್ಲಿಸಬೇಕು.                             
    ಕೃತಿಗಳು ರಾಜ್ಯ ಸರಕಾರದ ನೀತಿಗಳಿಗೆ, ಚಟುವಟಿಕೆಗಳಿಗೆ, ದೇಶಕ್ಕೆ ವಿರೋಧಿಯಾಗಿರಬಾರದು, ಯಾವುದೇ ಜಾತಿ-ಪಂಗಡ-ಧರ್ಮಕ್ಕೆ ಧಕ್ಕೆ ನೀಡದಂತೆ ಇರಬೇಕು. ಪ್ರಕಟಣೆ ಸಂಬಂಧ ಕಾಸರಗೋಡು ಪಂಚಾಯತ್ ಡೆಪ್ಯೂಟಿ ಡೈರೆಕಟ್ರ್ ಅವರ ತೀರ್ಮಾನ ಅಂತಿಮವಾಗಿರುವುದು ಎಂದು ಡಿ.ಡಿ.ಪಿ. ತಿಳಿಸಿದರು. 
     ರಚನೆಗಳನ್ನು ಮೇ 3ರ ಮುಂಚಿತವಾಗಿ ತಾವು ವಾಸಿಸುವ ಗ್ರಾಮಪಂಚಾಯತ್ ಕಚೇರಿಗೆ ಯಾ sureshbeen@gmail.com ಎಂಬ ಇ-ಮೇಲ್ ವಿಳಾಸಕ್ಕೆ ಸಲ್ಲಿಸಲು ತಿಳಿಸಲಾಗಿದೆ.   
                                             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries