ಕಾಸರಗೋಡು: ಟಾಟಾ ಗ್ರೂಪ್‍ನ ಕೋವಿಡ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮಂಗಳವಾರ ಆರಂಭಗೊಳ್ಳಲಿದೆ. ಚಟ್ಟಂಚಾಲ್ ಮಾಹಿನಾಬಾದ್‍ನಲ್ಲಿ ಇದಕ್ಕಾಗಿ ಮಂಜೂರು ಮಾಡಿದ ಐದು ಎಕರೆ ಸ್ಥಳದಲ್ಲಿ ಅಗತ್ಯವಾಗಿ ಬೇಕಿರುವ ಸ್ಥಳವನ್ನು ಸಮತಟ್ಟುಗೊಳಿಸುವ ಕೆಲಸ ಬಹುಪಾಲು ಸಂಪೂರ್ಣಗೊಂಡಿದೆ.
200 ಮೀಟರ್ ಉದ್ದ ಹಾಗು 50 ಮೀಟರ್ ಅಗಲದ ಪ್ರದೇಶದಲ್ಲಿ ಪ್ರಥಮ ಹಂತದ ನಿರ್ಮಾಣದ ಮುಂಚಿತವಾಗಿ ಸೆನ್ಸಿಂಗ್ ಕೆಲಸವನ್ನು ಆರಂಭಿಸಲಾಗುತ್ತದೆ. ಕನ್‍ಸ್ಟ್ರಕ್ಷನ್ ಎಕ್ಯೂಪ್‍ಮೆಂಟ್ ಆನರ್ಸ್ ಅಸೋಸಿಯೇಶನ್(ಸಿಐಒಎ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸ್ಥಳ ಸಮತಟ್ಟು ಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿತ್ತು.
ಕಗ್ಗಲ್ಲು ಒಡೆಯಲು ಹಿಟಾಚ್ಚಿಗಳು, ಜೆಸಿಬಿಗಳು, ರೋಲರ್‍ಗಳು, ಬ್ರೇಕರ್‍ಗಳು, ಟಿಪ್ಪರ್‍ಗಳನ್ನು ಬಳಸಿ ನೂರಾರು ಮಂದಿ ಕಾರ್ಮಿಕರು ದುಡಿದಿದ್ದಾರೆ.
ನೆಲ ಸಮತಟ್ಟುಗೊಳಿಸುವ ಕಾಮಗಾರಿಗೆ ಕನಿಷ್ಠ ಎರಡು ವಾರ ಅಂದಾಜಿಸಲಾಗಿದ್ದರೂ, ಅದಕ್ಕೂ ಮುನ್ನವೇ ಈ ಕೆಲಸ ಪೂರ್ತಿಯಾಗಿರುವುದರಿಂದ ಜಿಲ್ಲಾ„ಕಾರಿ ಡಾ|ಡಿ.ಸಜಿತ್‍ಬಾಬು, ಶಾಸಕ ಕೆ.ಕುಂಞÂರಾಮನ್, ಸಿ.ಇ.ಒ.ಎ. ಪದಾ„ಕಾರಿಗಳು ಮೊದಲಾದವರು ಸಂತೋಷ ವ್ಯಕ್ತಪಡಿಸಿದ್ದಾರೆ. ನಿರ್ಮಾಣಗೊಳ್ಳಲಿರುವ ಆಸ್ಪತ್ರೆಯ ಮಾರ್ಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 541 ಬೆಡ್‍ಗಳನ್ನು ವ್ಯವಸ್ಥೆಗೊಳಿಸಲಾಗುವುದು. ಒಂದು ಯೂನಿಟ್‍ಗೆ ಕನಿಷ್ಠ 11 ಲಕ್ಷ ರೂ. ಅಂದಾಜಿಸಲಾಗಿದೆ. ಹೈದರಾಬಾದ್, ಜಂಶದ್‍ಪುರ್, ಫರಿದಾಬಾದ್, ಕೋಲ್ಕತ್ತ, ಮುಂಬೈ ಮೊದಲಾದೆಡೆಗಳಲ್ಲಿರುವ ಟಾಟಾ ಫ್ಯಾಕ್ಟರಿಯಿಂದ ರೆಡಿಮೇಡ್ ಯೂನಿಟ್‍ಗಳನ್ನು ಮುಂದಿನ ವಾರ ಟ್ರೈಲರ್‍ಗಳಲ್ಲಿ ಸ್ಥಳಕ್ಕೆ ತಲುಪಿಸಲಾಗುವುದು.


