ಕಾಸರಗೋಡು: ಮೋಟಾರು ವಾಹನ ಇಲಾಖೆ ವತಿಯಿಂದ ಕಾಸರಗೋಡು ನಗರಸಭೆ ವ್ಯಾಪ್ತಿಯ ಸಮುದಾಯ ಅಡುಗೆಮನೆಗೆ ತರಕಾರಿಗಳನ್ನು ಹಸ್ತಾಂತರಿಸಲಾಯಿತು. ಈ ಹಿಂದೆಯೂ ತರಕಾರಿ ಒದಗಿಸಿದ್ದ ಇಲಾಖೆಗೆ ನಗರಸಭೆ ಕಾರ್ಯದರ್ಶಿ ಮತ್ತೆ ಮನವಿ ಸಲ್ಲಿಸಿದ್ದರು.
55 ಕಿಲೋ ಕುಂಬಳಕಾಯಿ, 16 ಕಿಲೋ ಚೀನಿಕಾಯಿ, 20 ಕಿಲೋ ಬಾಳೆಕಾಯಿ, 10 ಕಿಲೋ ಸೌತೆಕಾಯಿ, 7 ಕಿಲೋ ಅಲಸಂಡೆ, ತಲಾ 3 ಕಿಲೋ ಹಾಗಲಕಾಯಿ, ಬೆಂಡೆಕಾಯಿ, ಒಂದು ಕಿಲೋ ಬದನೆಕಾಯಿ, 2 ಕಿಲೋ ಹಸಿಮೆಣಸು, ನುಗ್ಗೆಕಾಯಿ, 3 ದೀವಿಹಲಸು ಹಸ್ತಾಂತರಿಸಲಾಗಿದೆ. ಎಂ.ವಿ.ಎ.ರತೀಶ್ ಮತ್ತು ವಾಹನಚಾಲಕ ಮನೋಝ್ ಕುಮಾರ್ ಅವರ ನೇತೃತ್ವದಲ್ಲಿ ನೀಲೇಶ್ವರ ಅನಂತಪಳ್ಳ ಮಧು ಅವರ ತೋಟದಲ್ಲಿ ಬೆಳೆಯಲಾದ ಈ ತರಕಾರಿಗಳನ್ನು ಖರೀದಿಸಿ ಇಲ್ಲಿ ಹಸ್ತಾಂತರಿಸಲಾಗಿದೆ.
ಕಾಸರಗೋಡು ರಸ್ತೆ ಸಾರಿಗೆ ಅಧಿಕಾರಿ ಎಸ್.ಮನೋಜ್ ಅವರು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅವರಿಗೆ ತರಕಾರಿಗಳನ್ನು ಹಸ್ತಾಂತರಿಸಿದರು. ಕಾರ್ಯದರ್ಶಿ ಬಿಜು, ಸಮುದಾಯ ಅಡುಗೆಮನೆಯ ಹೊಣೆ ಹೊಂದಿರುವ ಆರೋಗ್ಯ ಮೇಲ್ವಿಚಾರಕ ದಾಮೋದರನ್, ಎಂ.ವಿ.ಐ.ಗಳಾದ ದಿನೇಶ್ ಕುಮಾರ್,ವಿ.ಕೆ.ಪ್ರಸಾದ್, ಕೆ.ಆರ್.ಪಿ.ವಿ. ರತೀಶ್ ಟಿ., ವೈಕುಂಠನ್, ಎ.ಎಂ.ವಿ.ಐ.ಗಳಾದ ಸಿ.ಎ.ಪ್ರದೀಪ್ ಕುಮಾರ್, ಎಂ.ವಿ.ಪ್ರಭಾಕರನ್, ಎಂ.ಸುಧೀಶ್ ಮೊದಲಾದವರು ಜೊತೆಗಿದ್ದರು.


