HEALTH TIPS

ಇಂದು ಬಹುನಿರೀಕ್ಷಿತ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಕೋವಿಡ್ ಆಸ್ಪತ್ರೆಯಾಗಿ ಆರಂಭ


      ಪೆರ್ಲ: ಕೊರೋನಾ ಪ್ರತಿರೋಧ ಚಟುವಟಿಕೆಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಚುರುಕುಗೊಳಿಸುವ ಅಂಗವಾಗಿ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಚಟುವಟಿಕೆಯನ್ನು ಇಂದಿನಿಂದ ಆರಂಭಿಸಲಿದೆ. ಇಂದು(ಏ.6) ಸಂಜೆಯಿಂದ ಕೋವಿಡ್ 19 ಸೋಂಕು ಬಾಧಿತರ ದಾಖಲಾತಿ ಇಲ್ಲಿ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶ ಪ್ರಕಾರ 4 ದಿನಗಳ ಅವಧಿಯಲ್ಲಿ ಈ ವೈದ್ಯಕೀಯ ಕಾಲೇಜನ್ನು ಅತ್ಯಾಧುನಿಕ ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಯುದ್ಧಕಾಲ ಅವಧಿಯಂತೆ 
ಕಾರ್ಯಕ್ಷಮಗೊಳಿಸಲಾಗಿದೆ. ಕೋವಿಡ್ 19 ಸೋಂಕು ಬಾಧಿತರಿಗಾಗಿ ಮೊದಲ ಹಂತದಲ್ಲಿ 200 ಹಾಸುಗೆಗಗಳು ಇಲ್ಲಿ ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಯೋಜನೆ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ಸ್ವಾತಿ ವಾಮನ್ ತಿಳಿಸಿದರು. ಇಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ನಡೆಸಿ ನಂತರ ಹತ್ತು ಐ.ಸಿ.ಯು.ಹಾಸುಗೆಗಳನ್ನು ಹೆಚ್ಚುವರಿಯಾಗಿ ಸಜ್ಜುಗೊಳಿಸಲಾಗುವುದು. ಸುಮಾರು 7 ಕೋಟಿ ರೂ. ಮೌಲ್ಯದ ಅತ್ಯಧುನಿಕ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿವೆ. ಜೊತೆಗೆ ಹೆಚ್ಚುವರಿ ಸೌಲಭ್ಯ ಒದಗಿಸಲು ಕೆ.ಎಸ್.ಇ.ಬಿ. ಹತ್ತು ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದೆ. ಈ ಮೊಬಲಗಿನಿಂದ ಇನ್ನಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಖರೀದಿಸಬಹುದಾಗಿದೆ. ಇಲೆಕ್ಟ್ರಾ ಕಾರ್ಡಿಯೋಗ್ರಾಂ(ಇ.ಸಿ.ಜಿ.),ಮಲ್ಟಿ ಪರ್ಪಸ್ ಉಪಕರಣಗಳು ಸಹಿತ ಯಂತ್ರಗಳು ಈಗಾಗಲೇ ಇಲ್ಲಿಗೆ ತಲಪಿವೆ. ದೇಶದಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ಆದೇಶದ ಕಾರಣ ವೆಂಟಿಲೇಟರ್ ಸಹಿತ ಉಪಕರಣಗಳು ತಲಪದೇ ವಿವಿಧೆಡೆ ಬಾಕಿಯಾಗಿವೆ. ಶೀಘ್ರದಲ್ಲೇ ಅವುಗಳ ರವಾನೆನಡೆಯಲಿದೆ ಎಂದವರು ತಿಳಿಸಿರುವರು.
      ವೈದ್ಯರು, ಹೆಡ್ ನರ್ಸ್ ಗಳು, ಸ್ಟಾಫ್ ನರ್ಸ್ ಗಳು, ನಸಿರ್ಂಗ್ ಅಸಿಸ್ಟೆಂಟ್ ಗಳು ಸಹಿತ ಸುಮಾರು 17 ಮಂದಿಯನ್ನು ಇಲ್ಲಿ ಕರ್ತವ್ಯಕ್ಕೆ ನೇಮಿಸಲಾಗುವುದು. ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇವರನ್ನು ಬೇರೆ ಆರೋಗ್ಯ ಕೇಂದ್ರಗಳಿಂದ ಇಲ್ಲಿಗೆ ಕರೆತರಲಾಗುವುದು. ವೈದ್ಯಕೀಯ ಕಾಲೇಜಿನ ನಿರ್ಮಾಣ ಪೂರ್ಣಗೊಡಿರುವ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ನ್ನು ಈಗ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರ ವಿದ್ಯುತ್ ಸಂಪರ್ಕಕ್ಕಾಗಿ ಕಳೆದ ವಾರ ವೈದ್ಯಕೀಯ ಕಾಲೇಜು ಆವರಣದಲ್ಲಿ 160 ಕೆ.ವಿ. ಟ್ರಾನ್ಸ್ ಫಾರ್ಮರ್ ಸ್ಥಾಪಿಸಲಾಗಿದೆ.
     ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಮಾ.15ರಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಉದ್ಘಾಟಿಸಬೇಕಿತ್ತು. ಜನರಲ್ ಒ.ಪಿ.ಗೆ ಬದಲಾಗಿ ಪ್ರತ್ಯೇಕ ವಿಭಾಗಗಳ ಒ.ಪಿ., ಇದಕ್ಕಾಗಿ ಇತರ ವೈದ್ಯಕೀಯ ಕಾಲೇಜುಗಳ ಪರಿಣತರು ಇಲ್ಲಿಗೆ ಆಗಮಿಸುವುದರಲ್ಲಿದ್ದರು. ಆದರೆ ರಾಜ್ಯದ ಕೊರೋನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಆರೋಗ್ಯ ಸಚಿವೆ ಉದ್ಘಾಟನೆಯ ಸಮಾರಂಭವನ್ನು ಮುಂದೂಡಿಕೆ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries