ಮಂಜೇಶ್ವರ: ಮಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ವೈದ್ಯಕೀಯ ಸರ್ಟಿಫಿಕೆಟ್ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸಲಾಗಿದೆ. ತಲಪ್ಪಾಡಿ ಚೆಕ್ ಪೆÇೀಸ್ಟ್ ಬಳಿಯ ಸೌಲಭ್ಯಗಳಲ್ಲದೆ ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿ.ಎಚ್.ಸಿ)24 ತಾಸೂ ವೈದ್ಯಕೀಯ ಸರ್ಟಿಫಿಕೆಟ್ ನಿಡುವ ಸೇವೆ ಒದಗಿಸುವುದಾಗಿ ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ (ಹೆಲ್ತ್) ಡಾ.ಎ.ವಿ.ರಾಮದಾಸ್ ತಿಳಿಸಿರುವರು. ಹೆಚ್ಚುವರಿ ಮಾಹಿತಿಗೆ ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಷೈನಾ (ದೂರವಾಣಿ ಸಂಖ್ಯೆ: 9945560213) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಅಧಿಕಾರಿಗಳಿಂದ ಅವಲೋಕನ:
ಮಂಗಳೂರು ಆಸ್ಪತ್ರೆ ಗಳಿಗೆ ಕಾಸರಗೋಡಿನಿಂದ ರೋಗಿಗಳನ್ನು ಆಂಬುಲೆನ್ಸ್ ಮೂಲಕ ಕರೆದೊಯ್ಯುವ ಸಂಬಂಧ ಜಾರಿಗೊಳಿಸಲಾದ ನಿಬಂಧನೆಗಳ ಪಾಲನೆಯ ಅವಲೋಕನ ನಡೆಸುವ ನಡೆಸುವ ನಿಟ್ಟಿನಲ್ಲಿ ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮಂಜೇಶ್ವರ ಸಮಾಜ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. 24 ತಾಸೂ ವೈದ್ಯಕೀಯ ಸರ್ಟಿಫಿಕೆಟ್ ನೀಡುವ ವೈದ್ಯಾಧಿಕಾರಿಯನ್ನು ನೇಮಿಸಲಾಗಿದ್ದು, ಇಲ್ಲಿನ ಚಟುವಟಿಕೆಗಳನ್ನು ಅವಲೋಕನ ನಡೆಸಲಾಯಿತು.

