ಮಧೂರು: ಕೋವಿಡ್ ಲಾಕ್ ಡೌನ್ ಘೋಷಿಸಿದ ಕೆಲವು ದಿನಗಳ ಬಳಿಕ ಮನೆಗೆ ಬಂದ ಪತಿಗೆ ಬಾಗಿಲು ತೆರೆಯದ ಪತ್ನಿ ಮನೆಯಿಂದ ಹೊರಗೆ ನಿಲ್ಲಿಸಿದ ಘಟನೆ ನಡೆದಿದೆ. ಈ ವ್ಯಕ್ತಿಗೆ ಪೆÇಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಆಸರೆ ನೀಡಿದ್ದಾರೆ.
ಮಧೂರು ಗ್ರಾಮ ಪಂಚಾಯತಿಯ ಶಿರಿಬಾಗಿಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಕುಟುಂಬದಲ್ಲಿ ಈ ಘಟನೆ ನಡೆದಿದೆ. ಕಲ್ಲಿಕೋಟೆಯ ಹೊಟೇಲ್‍ನಲ್ಲಿ ಕೆಲಸವೆಂದು ಹೇಳಿ ಹೋಗಿದ್ದ 55 ರ ಹರೆಯದ ವ್ಯಕ್ತಿ ರಾತ್ರಿ ಮನೆಗೆ ಬಂದಿದ್ದರು. ಆದರೆ ಮೂರು ಮಕ್ಕಳ ತಾಯಿಯಾಗಿರುವ ಪತ್ನಿ ಇವರನ್ನು ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಖರ್ಚಿಗೆ ಹಣ ನೀಡದಿರುವುದು ಹಾಗು ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇವರನ್ನು ಮನೆಯೊಳಗೆ ಪ್ರವೇಶಿಸಲು ಬಿಡಲಿಲ್ಲ. ಈ ವಿಷಯ ತಿಳಿದು ಪೆÇಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ವ್ಯಕ್ತಿಯನ್ನು ಮಧೂರು ಪಂಚಾಯತಿಯ ಮಾಯಿಪ್ಪಾಡಿ ಡಯಟ್‍ನಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕೆ ತಲುಪಿಸಿದರು. ಮಧ್ಯಾಹ್ನ ಹಾಗು ರಾತ್ರಿ ಕಮ್ಯೂನಿಟಿ ಕಿಚ್ಚನ್‍ನಿಂದ ಆಹಾರ ಲಭಿಸುತ್ತಿದೆ. ಬೆಳಗ್ಗೆ ಹಾಗು ಸಂಜೆ ಡಯಟ್ ಅಧ್ಯಾಪಕ ಸಂತೋಷ್ ಅವರು ಚಾ ಹಾಗು ಫಲಾಹಾರ ತಲುಪಿಸುತ್ತಿದ್ದಾರೆ. ಆಹಾರ ತಲುಪಿಸುವವರೊಂದಿಗೆ ಪತ್ನಿ ಮಕ್ಕಳಿಗೆ ಆಹಾರ ಲಭಿಸುತ್ತಿದೆಯೇ ಎಂದು ಈ ವ್ಯಕ್ತಿ ಪ್ರಶ್ನಿಸುತ್ತಿದ್ದಾರೆ.


